ಸುದ್ದಿಬಿಂದು ಬ್ಯೂರೋ
ಧಾರವಾಡ
: ಪಿ ಎಸ್ ಐ ಆಕ್ರಮ ನೇಮಕಾತಿ(PSI Illegal Recruitment) ಹಗರಣದ ತನಿಖೆ ನಡೆದಿದೆ. ಹಿರಿಯ ಪೊಲೀಸ ಅಧಿಕಾರಿಗಳು ಸಿಕ್ಕು ಬಿದ್ದಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರೋದರಿಂದ ನ್ಯಾಯಾಲಯದ ಆದೇಶದಂತೆ ಸರ್ಕಾರ ಮುಂದೆ ಹೆಜ್ಜೆ ಇಡಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ(Home Minister G Parameshwar)ತಿಳಿಸಿದ್ದಾರೆ.

ಧಾರವಾಡದ ಎಸ್ ಪಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಪರಮೇಶ್ವರ, ಯಾವದೇ ಆಕ್ರಮ ಮಾಡದ ಇರುವ ವಿಧ್ಯಾರ್ಥಿಗಳನ್ನು ನೇಮಕಾತಿ ಆದೇಶ ಮಾಡ್ತಿರೋ, ಅಥವಾ ಮರು ಪರೀಕ್ಷೆ ನಡೆಸುತ್ತಿರೋ ಎಂದು ನ್ಯಾಯಾಲಯ ಸರ್ಕಾರದ ಅಭಿಪ್ರಾಯ ಕೇಳಿದೆ.

ನಾವು ಮರು ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಒಂದು ವೇಳೆ ನಮ್ಮ ಅಭಿಪ್ರಾಯವನ್ನು ನ್ಯಾಯಾಲಯ ಎತ್ತಿ ಹಿಡಿದರೆ, ನ್ಯಾಯಾಲಯದ ಆದೇಶ ಹೊರಬಿದ್ದ ಒಂದು ತಿಂಗಳಲ್ಲೇ ಪಿ ಎಸ್ ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸುತ್ತೆವೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ವರದಿ : ಧಾರವಾಡ ಜಿಲ್ಲಾ ಪ್ರತಿನಿಧಿ