ಸುದ್ದಿಬಿಂದು ಬ್ಯೂರೋ
ಕಾರವಾರ : ಇನ್ನೇನು ಕೆಲ‌ ತಿಂಗಳಲ್ಲಿ ಲೋಕಸಭಾ ಚುನಾವಣ ಎದುರಾಗಲಿದ್ದು, ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ‌ ಜೊತೆ‌ ಮೈತ್ರಿ ಮಾಡಿಕೊಂಡಿದೆ.ಉತ್ತರಕನ್ನಡದಲ್ಲಿ ಜೆಡಿಎಸ್ ಅಷ್ಟೋಂದು ಪ್ರಭಲವಾಗಿಲ್ಲ ಎಂದು ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದ ಆನಂದ ಅಸ್ನೋಟಿಕರ್ ಇದೀಗ ದಿಢೀರ್ ಆಗಿ ತಾನು ಕೂಡ ಜೆಡಿಎಸ್‌ ಅಭ್ಯರ್ಥಿ ಎನ್ನುವ ಮೂಲಕ ಬಿಜೆಪಿ ಹೊಲದಲ್ಲಿ ಬೆಳೆ ತೆಗೆಯಲು ಮುಂದಾಗಿದ್ದಾರೆ.

ಕಳೆದ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಆನಂದ ಅಸ್ನೋಟಿಕರ್ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಲಕ್ಷಕ್ಕೂ ಅಧಿಕ‌ ಮತಗಳನ್ನ ಪಡೆದು ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ವಿರುದ್ಧ ಸೋಲುವಂತಾಗಿತ್ತು. ನಂತರದ ದಿನದಲ್ಲಿ ಆನಂದ ಅಸ್ನೋಟಿಕರ್ ಪಕ್ಷದ ಯಾವುದೇ ಸಂಘಟನೆಯಿಂದ ದೂರವೇ ಉಳಿದಿದ್ದರು.ಇನ್ನೂ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧೆ ಮಾಡುವಂತೆ ಸಾಕಷ್ಟು ಅವಕಾಶಗಳು ಇದ್ದರೂ ಸಹ ಆನಂದ ಸ್ಪರ್ಧೆಯಿಂದ ದೂರವೇ ಉಳಿದುಕೊಂಡು ಜೆಡಿಎಸ್ ಗೂ ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಉಳಿದುಕೊಂಡಿದಲ್ಲದೆ. ಕಾರವಾರ ಹಾಗೂ ಹಳಿಯಾಳ ಕ್ಷೇತ್ರದಲ್ಲ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.

ವಿಧಾನಸಭಾ ಚುನಾವಣಾ ಬಳಿಕಾ ಸಂಪೂರ್ಣವಾಗಿ ರಾಜಕೀಯದಿಂದ ದೂರವಿದ್ದ ಆನಂದ ಯಾವಾಗ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತೋ ಆಗ ದಿಢೀರ ಆಗಿ ಆನಂದ ಅಸ್ನೋಟಿಕರ್ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಜೆಡಿಎಸ್ ನಲ್ಲಿಯೇ ಮುಂದುವರೆಯುತ್ತೆನೆ ಎಂದು ಹೇಳಿ‌ ಬಂದಿದ್ದಾರೆ.ಇದೀಗ ಇದೇ ವಿಚಾರವಾಗಿ ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆನಂದ ಅಸ್ನೋಟಿಕರ್ ತಾನು ಈ ಬಾರಿ ಉತ್ತರಕನ್ನಡ‌ ಲೋಕಸಭಾ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿಯಾಗಿದ್ದೇನೆ.ಬಿಜೆಪಿಯಿಂದ ಒಂದು ವೇಳೆ ಅನಂತಕುಮಾರ ಹೆಗಡೆ ಅವರು ಸ್ಪರ್ಧೆ ಮಾಡದೆ ಇದ್ದರೆ ತನಗೆ ಸ್ಪರ್ಧೆಗೆ ಅವಕಾಶ ನೀಡಬೇಕು ಅಂತಾ ಕುಮಾರಸ್ವಾಮಿ ಅವರಲ್ಲಿ ಕೇಳಿಕೊಂಡಿದ್ದೇನೆ ಎಂದಿದ್ದಾರೆ.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿರುವುದರಿಂದ ಒಂದು ವೇಳೆ ತನಗೆ ಮೈತ್ರಿ ಅಭ್ಯರ್ಥಿಯಾಗಿ ತನಗೆ ಲೋಕಸಭಾ ಟಿಕೇಟ್ ನೀಡಿದರೆ ಸುಲಭವಾಗಿ ಗೆಲ್ಲಬಹುದು ಎನ್ನುವುದು ಆನಂದ ಅಸ್ನೋಟಿಕರ್ ಅವರ ರಾಜಕೀಯ ಲೆಕ್ಕಾಚಾರ..