ಸುದ್ದಿಬಿಂದು ಬ್ಯೂರೋ
ಕಾರವಾರ:ಬರಲಿರುವ ಲೋಕಸಭಾ ಚುನಾವಣೆಗೆ(Lok Sabha Elections) ನಾನು ಸಹ ಆಕಾಂಕ್ಷಿಯಾಗಿದ್ದೇನೆ. ಈ‌‌ ಭಾರೀ ಬಿಜೆಪಿ(BJP) ಜೊತೆ ನಮ್ಮ‌ ಜೆಡಿಎಸ್‌ ಪಕ್ಷ‌ ಕೂಡ ಮೈತ್ರಿ ಮಾಡಿಕೊಂಡಿದೆ.‌ನಮ್ಮ‌ ಪಕ್ಷದಿಂದ ಅಭ್ಯರ್ಥಿಯನ್ನ ಕಣಕ್ಕಿಸಲು ಮುಂದಾದರೆ ನಾನು ಸಹ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಪ್ರಭಲ ಆಕಾಂಕ್ಷಿ ಎಂದು ಜೆಡಿಎಸ್ ಮುಖಂಡ‌ ಸೂರಜ್ ನಾಯ್ಕ ಸೋನಿ ಹೇಳಿದ್ದಾರೆ.

ಕಾರವಾರದಲ್ಲಿ(karwar)ಮಾಧ್ಯಮದವರ ಜೊತೆ ಮಾತನಾಡಿದ ಸೂರಜ್ ನಾಯ್ಕ ಸೋನಿ(Suraj Soni).ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತಗಳು ನಿರ್ಣಾಯಕವಾಗಿದೆ.ಬಿಜೆಪಿಯ ಹಾಲಿ ಸಂಸದರಾಗಿರುವ ‌ಅನಂತಕುಮಾರ ಹೆಡಗೆ(Anantakumar Hegde)ಅವರು ಈ ಭಾರೀ ಸ್ಪರ್ಧೆ ಮಾಡಲ್ಲ‌ ಎನ್ನುವ ಬಗ್ಗೆ ದೊಡ್ಡ ಸುದ್ದಿ ಇದೆ.‌ಅವರು ಸ್ಪರ್ಧೆ ಮಾಡದೆ ಇದ್ದ ಸಂದರ್ಭದಲ್ಲಿ ಜೆಡಿಎಸ್ ಗೆ ಸ್ಪರ್ಧೆಗೆ ಅವಕಾಶ ನೀಡಿದ್ದರೆ ನಾನು ಸ್ಪರ್ಧೆ ಮಾಡುತ್ತೇನೆ. ಲೋಕಸಭಾ ಕ್ಷೇತ್ರದ ಸಂಪೂರ್ಣವಾದ ಪರಿಚಯ ಇದೆ.ವಿಧಾಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿಯೇ ನನ್ನಗೆ 60 ಸಾವಿರಷ್ಟು ಮತಗಳನ್ನ ನೀಡಿದ್ದಾರೆ‌‌. ಇನ್ನೂ ಜೆಡಿಎಸ್ ಸಹ ಜಿಲ್ಲಾದ್ಯಂತ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳನ್ನ ಪಡೆದುಕೊಂಡಿದೆ‌ ಎಂದರು.

ಇನ್ನೂ ಜಿಲ್ಲಾಧ್ಯಂತ ಸಮುದಾಯದ ಮತಗಳ‌‌ ಜೊತೆ ಜೆಡಿಎಸ್ ಹಾಗೂ ಬಿಜೆಪಿ‌ ಮತಗಳು ಒಟ್ಟಾದರೆ ಗೆಲುವು ಕಷ್ಟವಲ್ಲ.‌ಅನೇಕ‌ ವರ್ಷಗಳಿಂದ ನಾನು ಹೋರಾಟದ ಮೂಲಕ‌ ರಾಜಕೀಯದಲ್ಲಿ ಗುರುಸಿಕೊಂಡು ಬಂದಿದ್ದೇನೆ.‌ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ‌ಜನರು ನನ್ನನ್ನು ವೈಯಕ್ತಿಕವಾಗಿ ನನ್ನ ಪರಿಚಯ ಮಾಡುತ್ತಾರೆ.‌ಈ ಹಿಂದೆ‌ ಬಿಜೆಪಿಯಲ್ಲಿ ಅನ್ಯಾಯವಾಗಿದಕ್ಕೆ‌ ಹೊರ ಹೋಗಿದ್ದೇನೆ.ರಾಜಕೀಯದಲ್ಲಿ ಇವೇಲ್ಲ‌ ಹೊಸದೆನಲ್ಲ ಎಂದಿದ್ದಾರೆ.ಒಟ್ಟಿನಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರವನ್ನ ಜೆಡಿಎಸ್ ಗೆ ಮಡಲಿಗೆ ಹಾಕುತ್ತಾ ಇಲ್ಲ ಬಿಜೆಪಿಯಿಂದಲ್ಲೆ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಾರ ಅಂತಾ ಕಾದು ನೋಡಬೇಕಿದೆ.