suddibindu.in
Ramanagara:ರಾಮನಗರ :ಕುಡಿದ ನಶೆಯಲ್ಲಿ ಪೊಲೀಸ್ ಠಾಣೆಗೆ ಬಂದ ವ್ಯಕ್ತ ಓರ್ವ ಪೊಲೀಸರಿಗೆ ಅವಾಚ್ಯ ಶಬ್ಧದಿಂದ ಬೈದು ಕೊನೆಗೆ ತಾನೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ (uttara Kannada)ಜಿಲ್ಲೆಯ ರಾಮನಗರ‌ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಕುಡಿತದ ನಶೆಯಲ್ಲಿ ಬೈಕ್ ಓಡಿಸಿಕೊಂಡು ರಾಮನಗರ ಪೊಲೀಸ್ ಠಾಣೆಗೆ ಬಂದ ಭಾಸ್ಕರ್ ಬೋಡೆಲ್ಕರ್ ತನ್ನ ಮಾವ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ ಬಳಿ ವಿಚಾರಿಸಿದ್ದಾನೆ.ಅದಕ್ಕೆ ಆ ಕೇಸ್ ಕೋಟ್‌ನಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಆಗ ಪೊಲೀಸರು ಆತನಿಗೆ ನೀನು ಕುಡಿದು ಬೈಕ್ ಓಡಿಸಿಕೊಂಡು ಬಂದಿದ್ದೀಯಾ ಹೀಗಾಗಿ ನಿನ್ನ‌ ವಿರುದ್ಧ ಕುಡಿದು ಬೈಕ್ ಓಡಿಸಿರುವ ಬಗ್ಗೆ ಕೇಸ್ ದಾಖಲಿಸಬೇಕಾಗಿತ್ತದೆಂದು ಹೇಳಿದ್ದಾರೆ.

ಇದನ್ನೂ ಓದಿ

ನಾನು‌ ಕುಡಿದು ಬಂದಿಲ್ಲ ಎಂದು ಪೊಲೀಸರ ವಿರುದ್ಧವೇ ಅವಾಚ್ಯ ಶಬ್ದದಿಂದ ಬೈದಿದ್ದಾನೆ.ಆಗ ಪೊಲೀಸರು ತಪಾಷಣೆ ಮಾಡಿದ್ದು drink and drive ಮಾಡಿರುವುದು ಪತ್ತೆಯಾಗಿದೆ.ಈ ವೇಳೆ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗುತ್ತಿದ್ದಂತೆ ಈತ ಠಾಣೆಯಲ್ಲಿ‌ ಚಿರಾಡಿಕೊಂಡಿದ್ದಾನೆ. ನನ್ನ ಮೇಲೆ ಕೇಸ್ ಮಾಡಿದರೆ ಪೆಟ್ರೋಲ್ ಸುರಿದು ಠಾಣೆಗೆ ಬೆಂಕಿ ಹಾಕುವುದಾಗಿ ಪೊಲೀಸರಿಗೆ ಬೆದರಿಸಿದ್ದಾನೆ ಎನ್ನಲಾಗಿದೆ. ನಂತರ ಠಾಣೆಯಿಂದ ಹೊರ ನಡೆದ ಆತ ಪೆಟ್ರೋಲ್ ತೆಗೆದುಕೊಂಡು ‌ಬಂದು ತನ್ನ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣ ‌ಠಾಣೆಯಲ್ಲಿದ್ದ ಪೊಲೀಸರು ಆತನಿಗೆ ಹೊತ್ತುಕೊಂಡ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು ಅಷ್ಟರಲ್ಲೆ ಆತನ ದೇಹಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಗಾಯವಾಗಿದೆ.‌ತಕ್ಷಣ ಬೆಂಕಿ ನಂದಿಸಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ‌ದಾಖಲಿಸಿ‌ ಚಿಕಿತ್ಸೆ ಕೊಡಿಸಿದ್ದು, ಗಂಭೀರ ಗಾಯವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಈಗಾಗಲೆ ಆತನಿಗೆ ಬೆಳಗಾವಿಯ ಕೆಎಲ್‌ಇ ( Kel Hospital) ರವಾನಿಸಲಾಗಿದೆ.