suddibindu.in
ಕುಮಟಾ : ದಕ್ಷೀಣ ಕಾಶಿ ಎಂದು ಪ್ರಸಿದ್ದಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ(uttara Kannada) ಗೋಕರ್ಣ (Gokarna) ಪ್ರವಾಸಿ ತಾಣಕ್ಕೆ ನಿತ್ಯವೂ ರಾಜ್ಯ ಸೇರಿದಂತೆ ದೇಶ-ವಿದೇಶಗಳಿಂದ ಸಾವಿರಾರು ‌ಪ್ರವಾಸಿಗರು ಆಗಮಿಸುತ್ತಾರೆ. ರಾತ್ರಿ 8ರ ನಂತರ ಯಾರೆ ಬಸ್ ನಿಲ್ದಾಣಕ್ಕೆ ಬಂದರೆ ನಡುರಸ್ತೆಯಲ್ಲೆ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿರಂತವಾಗಿದೆ.

ದೇಶ-ವಿದೇಶ ಹಾಗೂ ರಾಜ್ಯದ ಯಾವುದೇ ಜಿಲ್ಲೆಯಿಂದ ಗೋಕರ್ಣಕ್ಕೆ ಹೋಗಬೇಕು ಅಂದರೆ ಕುಮಟಾ ಬಸ್ ನಿಲ್ದಾಣಕ್ಕೆ ಬಂದೆ ಗೋಕರ್ಣಕ್ಕೆ ಹೋಗಬೇಕು. ಆದರೆ ರಾತ್ರಿ 8ಗಂಟೆ ನಂತರದಲ್ಲ ಯಾರೇ ಗೋಕರ್ಣಕ್ಕೆ ಹೋಗಬೇಕು ಅಂತಾ ಬಂದರೆ ರಾತ್ರಿ ಪೂರ್ತಿ ಕುಮಟಾ ಬಸ್ ನಿಲ್ದಾಣದಲ್ಲೆ ಕಳೆಯಬೇಕು. ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ ಅನೇಕ ವರ್ಷಗಳಿಂದ ಪರಿಸ್ಥಿತಿ ಹೀಗೆ ಮುಂದುವರೆದಿದೆ. ಜಿಲ್ಲೆಯ ಮದ್ಯವರ್ತಿ ಸ್ಥಳವಾಗಿರುವ ಕುಮಟಾ ಬಸ್ ನಿಲ್ದಾಣಕ್ಕೆ ರಾಜ್ಯದ ನಾನಾ ಕಡೆಯಿಂದ ದಿನದ 24ಗಂಟೆಯೂ ಬಸ್ ಬರುತ್ತದೆ. ಆದರೆ ದಕ್ಷೀಣ ಕಾಶಿ ಗೋಕರ್ಣಕ್ಕೆ ಮಾತ್ರ ರಾತ್ರಿ 8ರ ಬಳಿಕ ಬಸ್ ಸಮಸ್ಯೆ ಇದೆ.

ಇದನ್ನೂ ಓದಿ

ನಿತ್ಯವೂ ರಾತ್ರಿ 8ಗಂಟೆಯ ನಂತರದಲ್ಲಿ ಕುಮಟಾ ಬಸ್ ನಿಲ್ದಾಣಕ್ಕೆ ಹೋಗಿದ್ದರೆ ಬಹುತೇಕ ಮಂದಿ ಗೋಕರ್ಣಕ್ಕೆ ಹೋಗುವುದಕ್ಕೆ ಅಂತಾನೆ ಬಸ್‌ಗಾಗಿ ಕಾಯುತ್ತಿರುವುದು ಕಂಡು ಬರುತ್ತದೆ.ಅದೆಷ್ಟೋ ಪ್ರವಾಸಿಗರು ಬರುವಾಗ ಜೊತೆಯಲ್ಲೇ ರೊಟ್ಟಿ ಊಟ ಕಟ್ಟಿಕೊಂಡು ಬಂದವರು ಅಲ್ಲಿಯೇ ಕುಳಿತು ಅದನ್ನ ತಿಂದು ಅಲ್ಲೆ ಮಲಗಬೇಕಾಗಿದೆ. ಅಲ್ಲಿರುವ ಕೆಎಸ್‌ಆರ್‌ಸಿ ಸಿಬ್ಬಂದಿಗಳನ್ನ ಕೇಳಿದರೆ ಈಗ ಬರತ್ತೆ. ಇನ್ನೂ ಸ್ವಲ್ಪ ಹೊತ್ತಲ್ಲಿ ಬರತ್ತೆ ಅಂತಾ ಹೇಳಿ ಹೇಳಿ ರಾತ್ರಿ ಬೆಳಿಗ್ಗೆ ಮಾಡುತ್ತಾರೆಂದು ಅನೇಕ ಪ್ರವಾಸಿಗರು ದೂರುತ್ತಲೆ ಬಂದಿದ್ದಾರೆ.

ಶಕ್ತಿಯೋಜನೆ ಜಾರಿಯಾದ ನಂತರವಂತೂ ಇಲ್ಲಿಗೆ ಬರುವ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರವಾಸಿಗರಿಗೆ ಕೊರೆತೆಯಿಲ್ಲ. ರಾತ್ರಿ 8ರ ನಂತರ ಗೋಕರ್ಣಕ್ಕೆ ಬಸ್ ಇಲ್ಲದೆ ಆ ಮಹಿಳೆಯರು ರಾತ್ರಿ ಎಲ್ಲಾ ಬಸ್ ನಿಲ್ದಾಣದಲ್ಲೆ ಭಯದಲ್ಲೆ ಕಳೆಯಬೇಕಿದೆ.ರಾತ್ರಿ ವೇಳೆ ನಿದ್ರೆಗೆ ಏನಾದರೂ ಜಾರಿದ್ದರೆ ಕಳ್ಳರ‌‌ ಕಾಟ ಬೇರೆ. ಇರೋ ಬರೋ ವಸ್ತುಗಳನ್ನೆಲ್ಲಾ ಬಾಚಿ ಕೊಂಡು ಹೋದರೆ ಯಾರು ಅಚ್ಚರಿ ಪಡಬೇಕಾಗಿಲ್ಲ. ಇಂತಹ ಘಟನೆಗಳು ಸಹ ಅನೇಕ ಬಾರಿ ನಡೆದ ಉದಾರಣೆಗಳಿದೆ.

ಹೀಗಾಗಿ ರಾತ್ರಿ 8ರ ನಂತರ ಗೂಡಂಗಡಿಯಂತೆ ಗೋಕರ್ಣಕ್ಕೆ ಸಂಚರಿಸುವ ಬಸ್ ಬಂದ್ ಮಾಡದೆ ರಾತ್ರಿ ಕೊನೆಯದಾಗಿ 9ಗಂಟೆಗಾದರೂ ಒಂದು ಬಸ್ ಗೋಕರ್ಣ ಭಾಗಕ್ಕೆ ಬಿಡುವ ವ್ಯವಸ್ಥೆ ಆಗಲೇ ಬೇಕಿದೆ. ಇಲ್ಲದೆ ಹೋದರೆ ಪ್ರವಾಸಿಗರಿಗೆ ಸಂಚಾರದ ಸಮಸ್ಯೆ ಜೊತೆಗೆ ಇನ್ನೆನ್ನಾದರೂ ಅಪಾಯ ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ. ಕಾರಣ‌ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮುಖ್ಯವಾಗಿ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೇತ್ತುಕೊಳ್ಳಬೇಕಿರುವುದು ತೀರಾ ಅವಶ್ಯಕವಾಗಿದೆ‌ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.