ಸುದ್ದಿಬಿಂದು ಬ್ಯೂರೋ
ಕುಮಟಾ :- ತಾಲೂಕಿನ ತಹಶೀಲ್ದಾರ ಕಚೇರಿ ಮೂರೂರು ಕ್ರಾಸ್ ನಲ್ಲಿರುವ ನೂತನ ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಂತರವಾಗಿ ತಿಂಗಳು ಕಳೆದರೂ,ನೂತನ ಕಟ್ಟಡ ಮೂಲಭೂತ ಸೌಕರ್ಯವಿಲ್ಲದೆ ಸೊರಗುತ್ತಿದೆ.ಗ್ರೌಂಡ್ ಪ್ಲೋರ್ ನಲ್ಲಿ ಕಾರ್ಯ ನಿರ್ವಸಬೇಕಾಗಿದ್ದ RTC, ಭೂಮಿ ಸೇವಾ ಕೇಂದ್ರ, ಆಹಾರ ಶಿರಸ್ತೇದಾರರ ವಿಭಾಗ,ಟಪಾಲು ಸ್ವಿಕ್ರತಿ ವಿಭಾಗಗಳು ಪಿಟೋಪಕರಣಗಳ ಕೊರತೆಯಿಂದ ಮಹಡಿಯೇರಿ ಕುಳಿತಿದ್ದು, ಇದರಿಂದಾಗಿ ವಿಕಲಚೇತನರು ಮೆಟ್ಟಿಲೇರಲು ಹರಸಾಹಸ ಪಡುವಂತಾಗಿದೆ
.

ಜನರಿಗೆ ದಿನಂಪ್ರತಿಯಾಗಿ ಸೇವೆ ಒದಗಿಸಬೇಕಾದ ವಿಭಾಗಗಳು ಮೊದಲ ಮತ್ತು ಎರೆಡನೇ ಮಳಿಗೆಯೇರಿ ಕುಳಿತಿರುವುದು,ಪ್ರತಿನಿತ್ಯ ಆರ್.ಟಿ.ಸಿ, ರೇಶನ್ ಕಾರ್ಡ್ ತಿದ್ದುಪಡಿ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳಿಗಾಗಿ ತಹಶೀಲ್ದಾರ ಕಚೇರಿಗೆ ಆಗಮಿಸುವ ವಿಕಲಚೇತನರು ಮತ್ತು ವೃದ್ಧರು ಹೈರಾಣಾಗುತಿದ್ದಾರೆ.

ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಅಧಿಕಾರಿಗಳ ಸಿದ್ದ ಉತ್ತರ “ನೂತನ ಕಟ್ಟಡದಲ್ಲಿ ಲಿಪ್ಟ್ ವ್ಯವಸ್ಥೆಯಿದ್ದು,ವಿಕಲಚೇತನರು ಮತ್ತು ವೃದ್ಧರು ಲಿಪ್ಟ್ ನ ಸೌಲಭ್ಯ ಪಡೆಯಬಹುದಾಗಿದೆ “ಎನ್ನುತ್ತಾರೆ. ವಾಸ್ತವಕ್ಕೆ ಕಟ್ಟಡಕ್ಕೆ ಲಿಪ್ಟ್ ವ್ಯವಸ್ಥೆಯಿದೆಯಾದರೂ ಲಿಪ್ಟ್ ಕೆಟ್ಟು ಮೂರು ದಿನ ಕಳೆದಿದೆ.

ಇನ್ನೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ಸೇವೆಗಳ ವಿಭಾಗಗಳು ಮುಖ್ಯ ದ್ವಾರದಲ್ಲಿಯೇ ಇದೆ. ಆದ್ರೆ ಕುಮಟಾ ತಶೀಲ್ದಾರ ಕಚೇರಿಯ ಅಗತ್ಯ ಸೇವಾ ವಿಭಾಗಗಳು ಪಿಟೋಪಕರಣಗಳ ಕೊರತೆಯಿಂದ ಮಹಡಿಯೇರಿ ಕುಳಿತಿರುವುದರಿಂದ ಜನರು ಪರದಾಡುವಂತಾಗಿದೆ.ಬೆಟ್ಟವೇರಿದರೆ ತಿರುಪತಿ ತಿಮ್ಮಪ್ಪನ ದರ್ಶನವಾದರೂ ಸಿಕ್ಕಿತು.. ಆದರೆ ಕುಮಟಾ ತಶೀಲ್ದಾರ ಕಚೇರಿಯ ಮಹಡಿಯೇರಿದರೆ ಕೆಲಸಮಾತ್ರ ಆಗಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ.