ಸುದ್ದಿಬಿಂದು ಬ್ಯೂರೋ
ಕಾರವಾರ : ರಸ್ತೆಯಲ್ಲಿ ಜಲ್ಲಿಕಲ್ಲು ಖಾಲಿ ಮಾಡುತ್ತಿದ್ದ ಟಿಪ್ಪರಗೆ ವಿದ್ಯುತ್ ತಂತಿ ತಗುಲಿ ಟಿಪ್ಪರಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಕಾರವಾರ ನಗರದ ಹಬ್ಬುವಾಡ ಸಮೀಪದ ಪಿ ಎಂಡ್ ಟಿ ಸಮುಚ್ಚದ ಬಳಿ ನಡೆದಿದೆ.
.


ಹಬ್ಬುವಾಡ ಪಿ ಎಂಡ್ ಟಿ ಸಮುಚ್ಚದ ಸಮೀಪ ರಸ್ತೆ ಬದಿಯಲ್ಲಿ ಜಲ್ಲಿಕಲ್ಲು ಖಾಲಿ ಮಾಡುವ ವೇಳೆ ಮೇಲ್ಬಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಟಿಪ್ಪರ್ ಗೆ ಸ್ಪರ್ಶವಾಗಿದೆ. ಇದರಿಂದಾಗಿ ಟಿಪ್ಪರ್ ಗೆ ಬೆಂಕಿ ತಗುಲಿದೆ. ತಕ್ಷಣ ಅಲ್ಲೆ ಇದ್ದ ಸ್ಥಳೀಯ ಯುವಕರು ಟಿಪ್ಪರ್ ಗೆ ತಗುಲಿದ ಬೆಂಕಿಯನ್ನ ನಂದಿಸಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.