ಗೋಕರ್ಣ: ಓಂ ಬೀಚ್ ರಸ್ತೆಯಲ್ಲಿ ಮಾದಕ ವಸ್ತು (ಚರಸ್) ಮಾರಾಟಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿರುವ ಘಟನೆ ನಡೆದಿದೆ.

ಗೋಕರ್ಣದ ಬೇಲೆಹಿತ್ತಲದ ತುಳುಸು ಹಮ್ಮು ಗೌಡ, ಮೂಲೇಕೇರಿ ನಿವಾಸಿ ಶ್ರೀಧರ ಗೌಡ, ಹಾಗೂ ಕುಡ್ಲೆ ನಿವಾಸಿ ಸಂತ ಬದ್ದೂರ ಮೂವರನ್ನು ಬಂಧಿತ ಆರೋಪಿಗಳಾಗಿದ್ದಾರೆ.

ಸುಮಾರು ಹತ್ತು ಲಕ್ಷ ಬೆಲೆಬಾಳುವ 1ಕೆ.ಜಿ. 648 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ. ಗೋಕರ್ಣದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿರುವುದರ ಬಗ್ಗೆ ಕೇಳಿಬಂದಿದ್ದು ಶಂಕೆಯ ಮೇಲೆ ಪೊಲೀಸರು ಕಾರ್ಯಚರಣೆ ನಡೆಸಿದ್ದು ಮೂವರನ್ನ ಬಂಧಿಸಿ ಲಕ್ಷಾಂತರ ಬೆಲೆಯ ಮಾದಕ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪೋಲೀಸ್ ನಿರೀಕ್ಷಕ ಮಂಜುನಾಥ ಎಂ, ಉಪನಿರೀಕ್ಷಕ ಹರೀಶ್ ಎಚ್., ಪಿ.ಎಸ್.ಐ ಸಕ್ತಿ ವೇಲು, ಸಿಬ್ಬಂದಿಗಳಾದ ರಾಜೇಶ ನಾಯ್ಕ, ಅರವಿಂದ ಶೆಟ್ಟಿ ಪಾಲ್ಗೊಂಡಿದ್ದರು.