ಸುದ್ದಿಬಿಂದು ಬ್ಯೂರೋ
ಹೊನ್ನಾವರ; ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ವ್ಯಕ್ತಿ ಓರ್ವ ತನ್ನ ತಂದೆಯನ್ನೆ ಕಲ್ಲಿನಿಂದು ಹೊಡೆದು ಕೊಲೆ ಮಾಡಿರುವ ಘಟನೆ ಕರ್ಕಿ ತೊಪ್ಪಲ ಕೇರಿ ಗ್ರಾಮದಲ್ಲಿ ನಡೆದಿದೆ.
ಪಾಂಡುರಂಗ ಮೇಸ್ತಾ (62) ಎಂಬಾತನೆ ಕೊನೆಯಾಗಿರುವ ವ್ಯಕ್ತಿಯಾಗಿದ್ದಾರೆ.ಈತನ ಮಗ ಭರತ್ ಮೇಸ್ತಾ ಎಂಬಾತ ಮಾನಸಿಕ ಅಸ್ವಸ್ಥೆಗೆ ಒಳಾಗಿದ್ದ ಎನ್ನಲಾಗಿದೆ.ಮಾನಸಿಕ ಅಸ್ವಸ್ಥತೆ ಒಳಗಾಗಿರುವ ಬಗ್ಗೆ ಭರತ್ ಎಂಬಾತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈತ ಕಳೆದ ಒಂದು ವಾರದಿಂದ ಸರಿಯಾಗಿ ಟ್ಯಾಬ್ಲೆಟ್ ತಿನ್ನುತ್ತಿರಲಿಲ್ಲ. ಟ್ಯಾಬ್ಲೆಟ್ ತಿನ್ನುವಂತೆ ಪಾಂಡುರಂಗ ಮೇಸ್ತಾ ಮಗ ಭರತ್ ನಿಗೆ ಹೇಳುತ್ತಿದ್ದ ಎನ್ನಲಾಗಿದೆ.
ಇದೆ ವಿಚಾರಕ್ಕೆ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಭರತ್, ತಂದೆ ಪಾಂಡುರಂಗ ಮೇಸ್ತಾ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.