ಸುದ್ದಿಬಿಂದು ಬ್ಯೂರೋ
ಕಾರವಾರ :
ರಾಜ್ಯ ಸಚಿವ ಸಂಪುಟ ರಚನೆಗೆ ನಡೆದ ಸಾಕಷ್ಟು ಸರ್ಕಸ್ ಕೊನೆಗೂ ಅಂತ್ಯವಾಗಿದ್ದು, ನೂತನ ಸಚಿವ ಸಂಪುಟದಲ್ಲಿ 24ಮಂದಿ ಶಾಸಕರಿಗೆ ಸಚಿವ ಸ್ಥಾನ ಲಭಿಸಿದೆ.ಹಿರಿಯ ರಾಜಕಾರಣಿ ಆರ್ ದೇಶಪಾಂಡೆ ಅವರನ್ನ ಸಚಿವ ಸ್ಥಾನದಿಂದ  ಕೈ ಬಿಡಲಾಗಿದ್ದು, ಭಟ್ಕಳ ಶಾಸಕ ಮಂಕಾಳು ವೈದ್ಯ ಅವರಿಗೆ ಸಚಿವರಾಗುವ ಚಾನ್ಸ್ ಸಿಕ್ಕಿದೆ.

ಮಂಕಾಳು ವೈದ್ಯ ಅವರು ಎರಡನೇ ಭಾರಿ ಭಟ್ಕಳ ಕ್ಷೇತ್ರದಿಂದ ಗೆದ್ದೆ ಶಾಸಕರಾಗಿದ್ದು, ಎರಡನೇ ಅವಧಿಯಲ್ಲೆ ಸಿದ್ದು, ಡಿಕೆಶಿ ಸಚಿವ ಸಂಪುಟ ಸೇರಿಕೊಂಡಿದ್ದಾರೆ.ಆರ್ ವಿ ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರದಿಂದ ಹತ್ತು ಬಾರಿ ವಿಧಾಸನಭೆ ಸ್ಪರ್ಧೆ ಮಾಡಿದ್ದು, ಅದರಲ್ಲಿ ಒಮ್ಮೆ ಮಾತ್ರ ಅವರು ಸೋತ್ತಿರುವುದು ಬಿಟ್ಟರೆ ಉಳಿದ ಒಂಬತ್ತು ಬಾರಿ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಅಷ್ಟೆ ಅಲ್ಲದೆ ಯಾವ ಅಧಿಯಲ್ಲಿ ಇವರ ಸರಕಾರ ಬಂದಿದೆಯೋ ಆ ಸಮಯದಲ್ಲೆಲ್ಲಾ ಆರ್  ವಿ ಡಿ ಉನ್ನತ ಸ್ಥಾನವನ್ನೆ ಪಡೆದುಕೊಂಡಿದ್ದಾರೆ. ಅವರು ಸಿ ಎಂ ಸ್ಥಾನವೊಂದನ್ನ ಬಿಟ್ಟು ಉಳಿದಂತೆ ಸರಕಾರದಲ್ಲಿ ಹಾಗೂ ಪಕ್ಷದಲ್ಲಿ ಅನೇಕ ಸ್ಥಾನವನ್ನದಲ್ಲಿ ಕುಳಿತು ಅಧಿಕಾರಿ ನಡೆಸಿದ್ದಾರೆ.


ಸಚಿವ ಸ್ಥಾನ ಕೈ ತಪ್ಪಲು ಕಾರಣವಾಗಿದ್ದು ಏನು..?

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸಿದ್ದು, ಈ ಯಾತ್ರೆಗೆ ರಾಜ್ಯದ ಎಲ್ಲಾ ಕ್ಷೇತ್ರದಿಂದಲ್ಲೂ ಸಹ ಜನರನ್ನ ಸೇರಿಸಿಕೊಂಡು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯದ ನಾಯಕರು ಪ್ರತಿಯೊಂಬ ಶಾಸಕರಿಗೆ ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ಸೂಚನೆ ನೀಡಿದ್ದರು ಎನ್ನಲಾಗಿದ್ದು, ಆ ಯಾತ್ರೆಯ ಪ್ರಮುಖ ಜವಾಬ್ದಾರಿಯನ್ನ ವಹಿಸಿದ್ದ ಆರ್ ವಿ ದೇಶಪಾಂಡೆ ಅವರು ತಮ್ಮ ಕ್ಷೇತ್ರದಿಂದ ಯಾರನ್ನು ಕರೆತಂದಿಲ್ಲ ಎನ್ನುವ ಕಾರಣವನ್ನೆ ಮುಂದಿಟ್ಟಿಕೊಂಡ ಪಕ್ಷದ ಕೆಲ ನಾಯಕರು ಸಂಪುಟದಿಂದ ದೂರ ಇಡುವ ಕೆಲಸ ಮಾಡಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿದೆ. ಅಷ್ಟೆ ಅಲ್ಲದೆ ಇದುವರಗೆ ಜಿಲ್ಲೆಯಲ್ಲಿ ಪರ್ಯಾಯ ನಾಯಕರನ್ನ ಬೆಳೆಸಿಲ್ಲ ಎನ್ನುವ ಆರೋಪದ ಜೊತೆಗೆ ಆಯ್ಕೆಯಾಗಿರುವ ಯಾವ ಶಾಸಕರ ಜೊತೆ ಸಹ ಒಳ್ಳೆಯ ಸಂಬಂಧ ಇಟ್ಟುಕೊಂಡಿಲ್ಲ.ಹೀಗಾಗಿ ಸಚಿವ ಸ್ಥಾನವನ್ನ ಇವರಿಗೆ ನೀಡಿದ್ದರೆ ಲೋಕಸಭಾ ಚುನಾವಣೆಯಲ್ಲಿ ಲಾಭಕ್ಕಿಂತ ನಷ್ಟ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ ಸದ್ಯ ಸಚಿವ ಸ್ಥಾನದಿಂದ ದೂರವಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ ಶಾಸಕರಾಗಿ ಪಕ್ಷ‌ ಅಧಿಕಾರಕ್ಕೆ ಬಂದರೂ, ಅವರಿಗೆ ಇದೆ ಮೊದಲ‌ ಭಾರಿಗೆ ಸಂಪುಟ ಸೇರುವ ಅವಕಾಶ ಕೈತಪ್ಪಿದ್ದು, ಅವರ ರಾಜಕೀಯ ಜೀವನದಲ್ಲಿ ದೊಡ್ಡ ಶಾಕ್ ಆದಂತಾಗಿರುವುದು ಮಾತ್ರ ಸತ್ಯ.

ನೂತನ ಸಚಿವರು

.ಎಚ್.ಸಿ.ಮಹದೇವಪ್ಪ, ಎಚ್‌.ಕೆ. ಪಾಟೀಲ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ್, ಲಕ್ಷ್ಮೀ ಹೆಬ್ಬಾಳ‌ಕರ್, ಸಂತೋಷ್ ಲಾಡ್, ಎಂ.ಸಿ.ಸುಧಾಕರ್, ಡಿ. ಸುಧಾಕರ್‌, ಡಾ. ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಆ. ರಹೀಮ್ ಖಾನ್, ಬಿ.ನಾಗೇಂದ್ರ, ಮಂಕಾಳು ವೈದ್ಯ, ಮಧು ಬಂಗಾರಪ್ಪ, ಬೋಸರಾಜು, ಕೆ.ಎನ್‌.ರಾಜಣ್ಣ, ಬೈರತಿ ಸುರೇಶ್, ಶಿವಾನಂದ ಪಾಟೀಲ್‌, ಕೆ.ವೆಂಕಟೇಶ್, ಎಸ್‌.ಎಸ್‌. ಮಲ್ಲಿಕಾರ್ಜುನ್, ಎನ್.ಚಲುವರಾಯಸ್ವಾಮಿ, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ