suddibindu.in
KUMTA: ಕುಮಟಾ : ಓರ್ವ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿ ಆತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದರ ರಸ್ತೆಯಲ್ಲಿ ನಡೆದಿದೆ.
ಮಹಾಬಲೇಶ್ವರ ಬೀರಪ್ಪ ನಾಯ್ಕ,(55) ವರ್ಷ ಎಂಬುವವರೆ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಚಿರತೆ ದಾಳಿಗೆ ಒಳಗಾದ ಇವರನ್ನ ತಕ್ಷಣ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ
- TV9 ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ ಕೊಟ್ಟ ನಟಿ ಸಂಜನಾ ಹಾಗೂ ನಟ ವಿರಾಟ್
- ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಗುನಗಿಯವರಿಗೆ ಗುನಗಿ ಸಮಾಜ ಸಹಾಯವಾಣಿ ಸಂಘದಿಂದ ಸನ್ಮಾನ
- ಸ್ಕೂಟಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು : ಸ್ಕೂಟಿ ಸವಾರ ಗಂಭೀರ
ಇಂದು ಬೆಳಿಗ್ಗೆ ಮಾದರಿ ರಸ್ತೆಯಲ್ಲಿ ಚಿರತೆ ಓಡಾಡುತ್ತಿದ್ದು,ಇದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದರು, ಇನ್ನೂ ಚಿರತೆ ಪ್ರತ್ಯಕ್ಷವಾಗಿರುವುದರಿಂದಾಗಿ ಯಾರು ಕೂಡ ಮನೆಯಿಂದ ಹೊರಗಡೆ ಬಾರದಂತೆ ಗ್ರಾಮ ಪಂಚಾಯತದಿಂದ ಎಚ್ಚರಿಕೆ ನೀಡಲಾಗುತ್ತಿದೆ.
ಇನ್ನೂ ಚಿರತೆ ದಾಳಿ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವುದರಿಂದ ಬಾಡ ಸುತ್ತಮುತ್ತ ಬರುವ ಪ್ರವಾಸಿಗರು ಎಚ್ಚರ ವಹಿಸಬೇಕಿದೆ