ಸುದ್ದಿಬಿಂದು ಬ್ಯೂರೋ
ಕುಮಟಾ:ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ 37ನೇ ವರ್ಷದ ಗಣೇಶೋತ್ಸವ ಸಮಿತಿಯ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಇಂದು ಅದ್ದೂರಿಯಿಂದ ನಡೆಯಲಿದೆ.

ವರ್ಷದಿಂದ ವರ್ಷಕ್ಕೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಸೇರುತ್ತಿದ್ದು,ಅಚ್ಚರಿ ಮೂಡಿಸುವ ಛದ್ಮವೇಶದಾಗಿಗಳು ಹಾಗೂ ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಗಣೇಶ ಮೂರ್ತಿ ವಿಸಾರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.ಇಲ್ಲಿ ವಿಶೇಶವೆಂದರೆ 5 ಅಡಿ ಎತ್ತರದ ಮಂಗಳಮೂರ್ತಿ ಕೂರಿಸಿ, ಪೂಜೆ ಪುರಸ್ಕಾರಗಳು ನಡೆಯುತ್ತದೆ.ಏಳು ದಿನಗಳ ವರೆಗೆ ಈ ಕಾರ್ಯಕ್ರಮ ನಡೆಯುತ್ತದೆ. ದಿನಕ್ಕೊಂದು ಮನೋರಂಜನೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ.ಏಳನೇದಿನ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಡೊಳ್ಳುಕುಣಿತ, ವಯಕ್ತಿಕ ಛದ್ಮವೇಶದಾರಿಗಳು,ಸಾಮೂಹಿಕ ಛದ್ಮವೇಶ ಸೇರಿ 40ಕ್ಕೂ ಹೆಚ್ಚು ಛದ್ಮವೇಶ ಪಾತ್ರದಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೇರೆ ಬೇರೆ ತಾಲೂಕಿನಿಂದ ಜನರು ಗಣೇಶ ವಿಸರ್ಜನಾ ಕಾರ್ಯಕ್ರಮ ನೋಡಲು ಆಗಮಿಸುತ್ತಾರೆ.ಉತ್ತರಕನ್ನಡ ಜಿಲ್ಲೆಯಲ್ಲಿ ಅತಿ ಅದ್ದೂರಿಯಿಂದ ನಡೆಯುವ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಕೋಡ್ಕಣಿ ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮ ಕೂಡ ಒಂದಾಗಿದೆ.ಸಂಜೆ 3:30 ಕ್ಕೆ ಈ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಪೂಜೆ , ಸವಾಲು ನಡೆದ ನಂತರ 5:30 ಕ್ಕೆ ಮೆರವಣಿಗೆ ಪ್ರಾರಂಭವಾಗಲಿದೆ.ಜಿಲ್ಲೆಯ ಹಲವು ತಾಲೂಕು ಹಾಗೂ ಜಿಲ್ಲೆಗಳಿಂದ ಭಕ್ತಾದಿಗಳು ಇಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ