ಸುದ್ದಿಬಿಂದು ಬ್ಯೂರೋ
ಬೆಂಗಳೂರು : ರಾಜ್ಯ ವಿಧಾನಸಭೆಗೆ ಸಾಕಷ್ಟು ಹಗ್ಗಜಗ್ಗಾಟದ ನಡುವೆ ಇಂದು 34ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿದ್ದು, ಆದ್ರೆ ಇನ್ನೂ ಯಾರಿಗೆ ಯಾವ ಖಾತೆ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ನಾಳೆ ಖಾತೆ ಹಂಚಿಕೆ ಆಗಲಿದೆ ಎಂದು ಸಿ ಎಂ ಸಿದ್ದರಾಮಯ್ಯ ಬೆಂಗಳೂರಲ್ಲಿ ಮಾಧ್ಯಮಗಳಿಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ನೂತನ ಸಚಿವರಾಗಿ 34ಮಂದಿ ಸಚಿವರಾಗಿ ಸಂಪುಟ ಸೇರಿಕೊಂಡಿದ್ದಾರೆ. ಇದಾಗ ಸ್ವಲ್ಪ ಸಮಯದಲ್ಲೆ.ಯಾರಿಗೆ ಯಾವ ಖಾತೆ ನೀಡಲಾಗಿದೆ ಎನ್ನುವ ಬಗ್ಗೆ ಮಾಧ್ಯಗಳಲ್ಲಿ ಸಹ ಯಾರಿಗೆ ಯಾವ ಖಾತೆ ನೀಡಲಾಗಿದೆ ಎನ್ನುವ ಬಗ್ಗೆ ಸುದ್ದಿ ಬಿತ್ತರವಾಗಿದ್ದಲ್ಲೆ. ಯಾವ ಖಾತೆ ಯಾರಿಗೆ ಎಂದು ಬರೆದಿರುವ ಲಿಸ್ಟ್ ಸಹ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನಮ್ಮ ಸಚಿವ ಸಂಪುಟದಲ್ಲಿ ಮೊದಲಬಮ ಬಾರಿಗೆ ಆಯ್ಕೆ ಆಗಿರುವವರ ಬಿಟ್ಟು ಉಳಿದಂತೆ ಎಲ್ಲರಿಗೂ ಸರಿಸಮಾನವಾಗಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ. ಇನ್ನೂ ಕೆಲವು ಜಿಲ್ಲೆಯಲ್ಲಿ ಒಬ್ಬರಿಗೂ ಸಹ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಅಸಮಧಾನ, ಸಮಧಾನ ಇರುವುದು ಸಹಜ ಎನ್ನುವ ಮೂಲಕ ಖಾತೆ ವಿಚಾರದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿ ನೂತನ ಸಚಿವರಿಗೆ ಶಾಕ್ ಕೊಟ್ಟಿದ್ದಾರೆ. ನಿಜವಾಗಲ್ಲಿ ಹರಿದಾಡುತ್ತಿರು ಲಿಸ್ಟ್ ಯಾವುದು ಎನ್ನುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ ಉತ್ತರಿಸಬೇಕಿದೆ.