ಸುದ್ದಿಬಿಂದು ಬ್ಯೂರೋ
ಅಂಕೋಲಾ : ಧಾರವಾಡದಿಂದ ಕುಟುಂಸ್ಥರ ಜೊತೆ ಉತ್ತರಕನ್ನಡ ಜಿಲ್ಲೆಯ ಪ್ರವಾಸಕ್ಕೆ(Uttarkannada tour)ಬಂದಿದ್ದ ಯುವತಿ ಗಂಗಾವಳಿ ನದಿ ತಿರಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ವೇಳೆ ಬ್ರಹತ್ ಗಾತ್ರದ ಮೊಸಳೆಯಿಂದ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹೊಸಕಂಬಿಯಲ್ಲಿ ನಡೆದಿದೆ
.

ಧಾರವಾಡದ ದೊಡ್ಡಮನಿ ಕುಟುಂಬದ ಸದಸ್ಯರು ಪ್ರವಾಸಕ್ಕಾಗಿ ವಿಭೂತಿ ಫಾಲ್ಸ್ ಹಾಗೂ ಗೋಕರ್ಣಕ್ಕೆ ಹೊರಟಿದ್ದರು. ವಿಭೂತಿ ಫಾಲ್ಸ್ (Vibhuti falls) ಕಡೆಗೆ ಹೋಗುವಾಗ ಪ್ರಕೃತಿಯ ಸೊಬಗನ್ನು ಸೆರೆ ಹಿಡಿಯಲು ಗಂಗಾವಳಿ ನದಿ ತೀರದ ಹೊಸಕಂಬಿ ಬಳಿ ಯುವತಿ ವಾಹನದಿಂದ ಕೆಳಗೆ ಇಳಿದಿದ್ದಾಳೆ.

ಇನ್ನೇನು ನದಿಯ ವಿಹಂಗಮ ನೋಟದ ಸೆಲ್ಫಿ (Selfie) ತೆಗೆಯಬೇಕು ಎಂದು ಹೋಗಿದ್ದಾಳೆ.ಪಕ್ಕದಲ್ಲಿಯೇ ಬೃಹತ ಗಾತ್ರದ ಮೊಸಳೆ ನೋಡಿ ಆ ಯುವತಿ ಮೂರ್ಛೆ ಹೋದ ಘಟನೆ ನಡೆದಿದೆ.ಅಲ್ಲಿಯೇ ಪಕ್ಕದಲ್ಲಿದ್ದ ಸಂಬಂಧಿಕರು ಯುವತಿಯನ್ನು ರಕ್ಷಿಸಿದ್ದಾರೆ.