ಸುದ್ದಿಬಿಂದು ಬ್ಯೂರೋ
ಹೊನ್ನಾವರ : ಇಲ್ಲಿನ ನರ್ಸಿಂಗ್ ಹೋಂ ನಲ್ಲಿ ಲ್ಯಾಪ್ ಟೆಕ್ನಿಷಿಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಓರ್ವ ಸೇವೆಯಲ್ಲಿರುವಾಗಲೆ‌ ಕುಸಿದು ಬಿದ್ದು ಮೃತಪಟ್ಟಿರುವ ‌ಘಟನೆ‌ ಶಾರದಾ‌ ನರ್ಸಿಂಗ್ ಹೋಂ‌ನಲ್ಲಿ ನಡೆದಿದೆ.

ದತ್ತಾತ್ರೇಯ ಗೋಪಾಲ‌ ನಾಯ್ಕ, ಊರಕೇರಿ (54) ಎಂಬುವವರೆ ಹೃದಯಾಘಾತದಿಂದ ಮೃತಪಟ್ಟವರಾಗಿದ್ದಾರೆ. ಇವರು ಲ್ಯಾಬ್ ಟೆಕ್ನಿಷಿಯ್ ಅಷ್ಟೆ ಅಲ್ಲದೆ‌ ಪ್ರಸಿದ್ದ ಕೀರ್ತನೆಕಾರರು ಕೂಡ ಆಗಿದ್ದರು. ಇವರು ಕಳೆದ ಸರಿಸುಮಾರು 20 ವರ್ಷದಿಂದ ಶಾರದಾ ನರ್ಸಿಂಗ್ ಹೋಂ‌ ನಲ್ಲಿ‌ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಸಹ ಇವರು ನರ್ಸಿಂಗ್ ಹೋಂ ನಲ್ಲಿ ಸೇವೆಯಲ್ಲಿ ‌ಇರುವಾಗಲೇ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನ ಆಸ್ಪತ್ರೆ ವಾರ್ಡ್ ಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಓರ್ವ ಪುತ್ರ,ಪತ್ನಿ ಹಾಗೂ ಬಂಧು ಬಳಗ ಸೇರಿ ಅಪಾರ ಅಭಿಮಾನಿಗಳನ್ನ ಅಗಲಿದ್ದಾರೆ. ಇವರು ಉತ್ತಮ ಕಿರ್ತನೆಕಾರರಾಗಿದ್ದರು. ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಹೋಗಿ ಕಿರ್ತನೆ‌ ಮಾಡುವ ಮೂಲಕ ಜನಪ್ರೀಯತೆ ‌ಪಡೆದಿದ್ದರು. ಇವರ ನಿಧನದಿಂದಾಗಿ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ.