ಸುದ್ದಿಬಿಂದು ಬ್ಯೂರೋ
ಹೊನ್ನಾವರ : ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕ ನಿವೇದಿತಾ ಆಳ್ವಾ ಕಾಂಗ್ರೆಸ್ ಟಿಕೆಟ್ ನೀಡಲು ಮುಂದಾಗಿರುವ ಹಿನ್ನಲೆಯಲ್ಲಿ ಇದೀಗ ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇಂದು ಕರ್ಕಿಯಲ್ಲಿ ಸಭೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಈಗಾಗಲೆ ಸ್ಥಳೀಯ 14 ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಹೀಗಿರುವ ಪಕ್ಷದ ಹೈಕಮಾಂಡ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾಗೆ ಟಿಕೇಟ್ ನೀಡಲು ಮುಂದಾಗಿರುವುದು ಸರಿಯಲ್ಲ. ಪಕ್ಷಕ್ಕಾಗಿ ಕ್ಷೇತ್ರದಲ್ಲಿ ದುಡಿಯುತ್ತಿರುವವರನ್ನ ಬಿಟ್ಟು ಹೊರಗಿನಿಂದ ಬಂದ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡಲು ತಮ್ಮ ವಿರೋಧವಿದೆ.
ಕ್ಷೇತ್ರದವರೇ ಅಲ್ಲದ ನಿವೇದಿತ್ ಆಳ್ವಾ ಅವರಿಗೆ ಯಾರದ್ದೋ ಒತ್ತಡಕ್ಕೆ ಒಳಗಾಗಿ ಹೈಕಮಾಂಡ ಸ್ಥಳೀಯ ಕಾರ್ಯಕರ್ತರನ್ನ ನಿರ್ಲಕ್ಷಿಸಲು ಮುಂದಾಗಿದೆ.ಈಗಾಗಲೇ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ 14 ಆಕಾಂಕ್ಷಿಗ ಪೈಕಿ ಯಾರಿಗೆ ಬೇಕಾದ್ದರೂ ಟಿಕೆಟ್ ನೀಡಿದರು ತಮ್ಮ ವಿರೋಧವಿಲ್ಲ. ಆದರೆ ಹೊರಗಿನವರಾಗಿರುವ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡಿದ್ದಲ್ಲಿ ಅವನ್ನ ಗೆಲ್ಲಿಸುವುದು ಕಷ್ಟವಾಗಲಿದೆ. ಯಾವುದೆ ಒತ್ತಡಕ್ಕೆ ಮಣಿಯದೆ ಸಮರ್ಥವಾಗಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ.