ಸುದ್ದಿಬಿಂದು ಬ್ಯೂರೊ
ಬೆಂಗಳೂರು
: ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ 124 ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇನ್ನೂ ನೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಬೇಕಿದ್ದು, ನಾಳೆ‌ ಮತ್ತಷ್ಟು ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆದರೆ ಎರಡನೇ ಪಟ್ಟಿಯಲ್ಲೂ ಕುಮಟಾ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ ಎನ್ನಲಾಗಿದೆ.

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗಾಗಿ 14 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿದ್ದರು. ಈ ನಡುವೆ ನಿವೇದಿತ್ ಆಳ್ವಾ ಕೂಡ ಕುಮಟಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದು, ಟಿಕೆಟಿಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಸದ್ಯ ನಿವೇದಿತ್ ಆಳ್ವಾ ಹಾಗೂ ಮಂಜುನಾಥ ಎಲ್. ನಾಯ್ಕ ಅವರ ನಡುವೆ ಟಿಕೆಟ್ ಪೈಟ್ ನಡೆಯುತ್ತಿದೆ ಎನ್ನಲಾಗಿದೆ.

ನಿವೇದಿತ್ ಆಳ್ವಾಗೆ ಟಿಕೆಟ್ ಅಂತಿಮಗೊಂಡಿದ್ದೇ ಆಗಿದ್ದರೆ ಘೋಷಣೆ ಮಾಡಲು ಇಷ್ಟೆಲ್ಲಾ ವಿಳಂಬ ಏಕೆ? ಎನ್ನುವ ಬಗ್ಗೆ ಸಹ ಚರ್ಚೆ ಕೂಡ ನಡೆಯುತ್ತಿದೆ.

ಒಟ್ಟಾರೆ ಹೈಕಮಾಂಡ್ ವಿಳಂಬ ನೀತಿಯಿಂದ ಮತ್ತಷ್ಟು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ‌ಆಕ್ರೋಶ ವ್ಯಕ್ತಪಡಿಸಿ ಹೈಕಮಾಂಡ್ ಕೆಂಗಣ್ಣಿಗೆ ಗುರಿ ಆದರೂ ಅಚ್ಚರಿಯಿಲ್ಲ.