ಸುದ್ದಿಬಿಂದು ಬ್ಯೂರೋ
ಕುಮಟಾ :
ನಿನ್ನೆ (ಸೋಮವಾರ) ರಾತ್ರಿ 8 ಗಂಟೆ ಸುಮಾರಿಗೆ ತನ್ನ ಕಿರಾಣಿ ಅಂಗಡಿಯಲ್ಲಿ ಕೂತಿದ್ದ ಕುಮಟಾ ಬಿಜೆಪಿ ನಗರ ಘಟಕ ನಾಯಕಗೆ ಯುವಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಟ್ಟಣದ ಮೂರುಕಟ್ಟೆಯಲ್ಲಿ ನಡೆದಿದೆ.

ರಾತ್ರಿ ಪಟ್ಟಣದ ಮೂರುಕಟ್ಟೆ ಬಳಿಯ ಬಿಜೆಪಿ ಮುಖಂಡನ ಅಂಗಡಿಗೆ ನುಗ್ಗಿದ ಯುವಕನೊಬ್ಬ ಅಂಗಡಿಯಲ್ಲಿ ಕೂತಿದ್ದ ಕುಮಟಾ ಬಿಜೆಪಿ ನಗರ ಘಟಕದ ಮುಖಂಡ ಎನ್ನಲಾದ ಮೂಸಾ ಎಂಬ ಯುವಕಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಮೂಸಾ ಎಂಬಾತ ಯುವಕನ ಹೊಡೆತ ತಾಳಲಾರದೆ ಎದ್ನೋ ಬಿದ್ನೋ ಎಂದು ಅಂಗಡಿಯಿಂದ ಓಡಿದ್ದಾನೆ. ಇದನ್ನು ಗಮನಿಸಿದ ಪಕ್ಕದ ರಿಕ್ಷಾ ಸ್ಟ್ಯಾಂಡಿನಲ್ಲಿ ಕೂತಿದ್ದ ಆಟೋ ಚಾಲಕರು ಅಂಗಡಿಗೆ ದಿಢೀರ್ ನುಗ್ಗಿದ ಯುವಕನನ್ನು ತಡೆದು ಯಾಕೆ? ಏನು? ಎಂದು ವಿಚಾರಿಸಿದ್ದಾರೆ.

ಆಟೋ ಚಾಲಕರ ಪ್ರಶ್ನೆಗೆ ಯುವಕ ಏನೂ ಉತ್ತರಿಸದಿದ್ದಾಗ ಪ್ರಕರಣ ನಿಗೂಢಗೊಂಡು ಆಟೋ ಚಾಲಕರ ಕುತೂಹಲಕ್ಕೂ ಕಾರಣವಾಗಿದೆ. ಅಂಗಡಿಗೆ ನುಗ್ಗಿ ಬಿಜೆಪಿ ನಗರ ಘಟಕ ನಾಯಕಗೆ ಹಲ್ಲೆ ಮಾಡಿದ ಯುವಕ ಪಟ್ಟಣದ ಸುಭಾಸ್ ರಸ್ತೆಯ ಬ್ಯಾಂಕ್ ಒಂದರ ಉದ್ಯೋಗಿ ಎಂದು ತಿಳಿದು ಬಂದಿದ್ದು, ಈತ ಅಮಾಯಕ ಎನ್ನಲಾಗಿದೆ. ಆದರೆ ಈ ಅಮಾಯಕನ ಆಕ್ರೋಶಕ್ಕೆ ಕಾರಣವೇನೆಂಬುದು ನಿಗೂಢವಾಗೇ ಉಳಿದಿದೆ.

ಸ್ಥಳಕ್ಕೆ ಧಾವಿಸಿದ ನಾನಾ ಮುಖಂಡರು ಮತ್ತು ಹಲ್ಲೆ ಮಾಡಿದ ಯುವಕ ಕಾರ್ಯನಿರ್ವಹಿಸುವ ಬ್ಯಾಂಕಿನ ನಿರ್ದೇಶಕ ಮತ್ತು ಮಾಜಿ ನಿರ್ದೇಶಕರೆಲ್ಲ ಸೇರಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದ ಪ್ರಕರಣವನ್ನು ರಾಜಿ ಪಂಚಾಯತಿಯಲ್ಲಿ ಮುಗಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ಸ್ಥಳೀಯರು ನಾನಾ ರೀತಿ ಮಾತಾಡುತ್ತಿದ್ದು, ಈ ಬಿಜೆಪಿ ಘಟಕ ಮುಖಂಡ ಜನಪ್ರತಿನಿಧಿಯೊಬ್ಬನ ಬಾಟಲಿ ದೋಸ್ತ್ ಆಗಿದ್ದು, ಎಣ್ಣೆ ಹೊಡೆಯುವಾಗ ಏನೋ ಹೆಚ್ಚು ಕಡಿಮೆ ಆಗಿದೆ ಅಥವಾ ಯಾವುದೋ ಹುಡುಗಿಯರ ವಿಷಯ ಇರಬೇಕು ಎಂಬ ಚರ್ಚೆ ಜೋರಾಗೇ ನಡೆಯುತ್ತಿದೆ.

ಈ ಪ್ರಕರಣ ಬಹಿರಂಗಗೊಂಡು ಮುಂದೆ ರಾಜಕೀಯಮಯ ಆದರೂ ಆಶ್ಚರ್ಯವಿಲ್ಲ ಎಂದು ಬಿಜೆಪಿಗರೇ ಹೇಳುತ್ತಿದ್ದಾರೆ. ಯಾಕೆಂದರೆ ಈ ಕಿರಾಣಿ ಅಂಗಡಿ ಕುಟುಂಬ ಪೂರ್ತಿ ಸಂಘ ಪರಿವಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಾಗಿದ್ದಾರೆ. ಸಂಘದಿಂದ ಬಂದವರು ಹೀಗೇಲ್ಲ ಮಂಗನಾಟ ಮಾಡುತ್ತಾರಾ? ಎನ್ನುವ ಬಗ್ಗೆಯೂ ಸಣ್ಣಗೆ ಗುಸು ಗುಸು ಆರಂಭವಾಗಿದೆ.