ಸುದ್ದಿಬಿಂದು ಬ್ಯೂರೋ
ಭಟ್ಕಳ : ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕುಮಟಾದಿಂದ ಭಟ್ಕಳದ ವರಗೆ ಸ್ವಾಭಿಮಾನದ ಪಾದಯಾತ್ರೆ ಮಾಡುವ ಮೂಲಕ ಜಿಲ್ಲಾ ಉಸ್ತುವಾರಿ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಫೆಬ್ರವರಿ 5ರಂದು ಕುಮಟಾದಿಂದ ಆರಂಭವಾದ ಈ ಪಾದಯಾತ್ರೆ ಇಂದು ಭಟ್ಕಳಕ್ಕೆ ತಲುಪಿ ಸಚಿವ ಮಂಕಾಳು ವೈದ್ಯ ಅವರ ಕಚೇರಿ ಎದುರು ಜಮಾಯಿಸಿ ಈ ಭಾರಿಯ ರಾಜ್ಯ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಈ ಭಾರಿಯ ಬಜೆಟ್ ನಲ್ಲಿ ಅನುಧಾನ ಬಿಡುಗಡೆ ಮಾಡದೆ ಹೋದರೆ ಮುಂದಿನ ದಿನದಲ್ಲಿ ಸಚಿವರ ಕಚೇರಿ ಎದುರುಲ್ಲೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನ ಹಮ್ಮಿಕೊಳ್ಳುವುದಾಗಿ ಅನಂತಮೂರ್ತಿ ಎಚ್ಚರಿಸಿದರು.

ಉತ್ತರಕನ್ನಡ ಜಿಲ್ಲೆ ಬೌಗೋಳಿಕವಾಗಿ ವಿಸ್ತಾರವಾಗಿದೆ. ಈ ಜಿಲ್ಲೆಯಲ್ಲಿ‌ ಒಂದೇ ಒಂದು ಆಸ್ಪತ್ರೆ‌ ಇಲ್ಲದೆ‌ ಇರುವುದರಿಂದ ಯಾರೆ ಅನಾರೋಗ್ಯಕ್ಕೆ‌ ಇಲ್ಲವ ಅಪಘಾತಕ್ಕೆ ಒಳಗಾದರೆ ಪಕ್ಕದ ‌ಮಂಗಳೂರಿಗೋ ಇಲ್ಲಾ ಗೋವಾಕ್ಕೆ ಅಲೆದಾಡಬೇಕಾಗಿದೆ. ಈ ಬಗ್ಗೆ ಇದುವರೆಗೆ ಸಾಕಷ್ಟು ಹೋರಾಟಗಳು ನಡೆಸಿದರು ಸರಕಾರಗಳು ಗಮನ ಹಸಿರುತ್ತಿಲ್ಲ. ಈ ಹಿಂದಿನ ಸರಕಾರ ಆಸ್ಪತ್ರೆಗೆ ನಿರ್ಮಾಣಕ್ಕಾಗಿ ಕುಮಟಾದಲ್ಲಿ ಸ್ಥಳ ಗುರುತಿಸಿದೆ.ಆದರೆ ಇನ್ನೂ ಯಾವುದೇ ಪ್ರಕ್ರಿಯೆ ನಡೆಸಲಾಗಿಲ್ಲ.

ಹೀಗಾಗಿ ಈಗಿನ ಸರಕಾರ ತಕ್ಷಣ ಆಸ್ಪತ್ರೆಗೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಬೇಕು. ಮತ್ತು ಈ ಹಿಂದೆ ಗುರುತ್ತಿರುವ ಸ್ಥಳದಲ್ಲೇ ಆಸ್ಪತ್ರೆಗೆ ನಿರ್ಮಾಣ ಮಾಡಬೇಕಿದೆ.ಸಚಿವರು ಅಧಿಕಾರ ವಹಿಸಿಕೊಂಡಾಗ ಸರಕಾರ ಆಸ್ಪತ್ರೆ ನಿರ್ಮಾಣ ಮಾಡದೆ ಹೋದಲ್ಲಿ ತಾವೇ ತಮ್ಮ ಹಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದರು ಆದರೆ ಅದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಎಲ್ಲವನ್ನ ನೋಡಿದರೆ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣವಾಗುವ ಲಕ್ಷಣ‌ ಕಂಡು ಬರತ್ತಾ ಇಲ್ಲ. ಹೀಹಾಗಿ ಅನಿರ್ವಾಯವಾಗಿ ನಾವು ಆಸ್ಪತ್ರೆಗಾಗಿ ಮತ್ತೆ ಹೋರಾಟಬನ್ನ‌ ಮಾಡಬೇಕಾಗಿದೆ. ಈ ಹಿಂದೆ ಶಿರಸಿಯಿಂದ ಕಾರವಾರದ ತನಕ 140ಕಿ.ಮಿ ಪಾದ್ರಯಾತ್ರೆ ಮಾಡಿದ್ದೆ.ಬೆಳಗಾವಿಯಲ್ಲಿ‌‌ ನಡೆದ‌ ಚಳಿಗಾಲದ ಅಧಿಬೇಶದಲ್ಲೂ ಪ್ರತಿಭಟನೆ‌ ಮಾಡಿದ್ದೇ‌ವೆ.ನಮ್ಮ‌ಹೋರಾಟ ಆಸ್ಪತ್ರೆ ನಿರ್ಮಾಣ ವಾಗುವವರೆಗೆ ಹೋಎಅ