ಸುದ್ದಿಬಿಂದು ಬ್ಯೂರೋ
ಕಾರವಾರ : ಬರಲಿರುವ ಲೋಕಸಭಾ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಎಂ.ಪಿ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಉತ್ತರಕನ್ನಡ ‌ಜಿಲ್ಲೆಯನ್ನು ಇಬ್ಬಾಗಿಸಲು ನಡಸಿದ ಪ್ರಯತ್ನ ಅವರಿಗೆ ಮಳ್ಳಾಗಲಿದೆ ಎನ್ನಲಾಗುತ್ತಿದೆ.

ಹೌದು ಸಮೃದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯನ್ನು ಹೇಗಾದರೂ ಮಾಡಿ ಇಬ್ಬಾಗಿಸಲೇಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿರುವುದು ಎಲ್ಲರಿಗೂ ತಿಳಿದ ವಿಷಯ. ಅದೂ ಏಕಾಂಗಿ ಪ್ರಯತ್ನ. ಆದರೆ ಜಿಲ್ಲೆಯನ್ನು ಒಡೆಯುವುದರ‌ ಬಗ್ಗೆ ಸಂಸದರು ಸೇರಿದಂತೆ ಯಾವ ಶಾಸಕರು ಸಹ ಧ್ವನಿ ಎತ್ತಲಿಲ್ಲ. ಆದರೆ ಕಾಗೇರಿ ಅವರು ಶಾಸಕರಾಗಿದ್ದ ಅವಧಿಯಿಂದ ಸ್ಪೀಕರ್ ಆಗಿರುವಾಗಲು ಕೂಡ ಜಿಲ್ಲೆ ಇಬ್ಬಾಗ ಆಗಲೇ ಬೇಕು ಎನ್ನುವ ಪ್ರಯತ್ನದಲ್ಲಿ ಸಾಕಷ್ಟು ಪ್ರಯತ್ನ ನಡೆಸಿರುವ ಬಗ್ಗೆ ಮತ್ತೆ ಹೇಳಬೇಕಾಗಿಲ್ಲ. ಈ ಬಗ್ಗೆ ಅವರೆ ಜಿಲ್ಲೆ ಇಬ್ಬಾಗ ಮಾಡುವುದಾಗಿ ಮಾಧ್ಯಮಗಳಿಗೆ ಹೇಳಿಕೆಯನ್ನ ಕೂಡ ನೀಡಿದ್ದಾರೆ. ಅವರು ಯಾವಾಗ ಈ ಹೇಳಿಕೆಯನ್ನ ನೀಡಿದ್ದರೋ ಅಂದಿನಿಂದಲ್ಲೂ ಕರಾವಳಿ ತಾಲೂಕಿನಲ್ಲಿ ಅವರ ಹೇಳಿಕೆ ಬಗ್ಗೆ ಅಸಮಧಾನ ಉಂಟಾಗುತ್ತಲೇ ಇದೆ.

ಅವರು ಈ ಹಿಂದೆ ಸಚಿವರಾಗಿದ್ದಾಗಲೂ ಜಿಲ್ಲಾ ಕೇಂದ್ರ ಕಾರವಾರದಿಂದ ಬಹುತೇಕ ಕಚೇರಿಗಳನ್ನ ಶಿರಸಿಯಲ್ಲಿ ಮಾಡಿಕೊಳ್ಳುವ ಮೂಲಕ ಜಿಲ್ಲೆ ಇಬ್ಬಾಗದ ಬಗ್ಗೆ ಪ್ರಯತ್ನ ನಡೆಸುತ್ತಲೇ‌ ಬಂದಿದ್ದಾರೆ. ಅಷ್ಟೆ ಅಲ್ಲದೆ ಈಗ ಕಾರವಾರದಲ್ಲಿ ಇರುವ ಮೆಡಿಕಲ್ ಕಾಲೇಜನ್ನು ಸಹ ಶಿರಸಿಗೆ ತೆಗೆದುಕೊಂಡು ಹೋಗುವ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿರುವುದು ಯಾರಿಗೂ ಸಹ ತಿಳಿಯದೆ ಇರುವ ವಿಚಾರವಲ್ಲ‌.ಈ ಹಿಂದೆ ಇವರೆ ಶಿಕ್ಷಣ ಸಚಿವರಾಗಿರುವ ಸಮಯಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಗೆ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡುವ ಮೂಲಕ ಆರಂಭಿಕವಾಗಿ ಶಿಕ್ಷಣ ಕ್ಷೇತ್ರದ ಮೂಲಕ ಈಗಾಗಲೇ ಜಿಲ್ಲೆಯನ್ನ ಇಬ್ಬಾಗ ಮಾಡಿಯಾಗಿದೆ.

ಅಖಂಡವಾಗಿರುವ ಜಿಲ್ಲೆಯನ್ನ ಇಬ್ಬಾಗ ಮಾಡಬಾರದು ಎನ್ನುವುದು ಜಿಲ್ಲೆಯ ಕರಾವಳಿ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಪತ್ರಕರ್ತರು,
ಪರಿಸರ ಪ್ರೇಮಿಗಳು ಸೇರಿದಂತೆ ಬಹುತೇಕ ಹೆಚ್ಚಿನ ಸಂಖ್ಯೆಯ ಜನರ ವಾಧ ಕೂಡ ಆಗಿದೆ. ಹೀಗಿರುವಾಗಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಿಲ್ಲೆಯನ್ನ ಇಬ್ಬಾಗ ಮಾಡಬೇಕು ಎನ್ನುವವರಲ್ಲಿ ಇವರು ಮೊದಲನೆ ಸಾಲಿನಲ್ಲಿ ಕಾಣಿಸಿಕೊಂಡು ಬಂದಿದ್ದಾರೆ.ಆದರೆ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ನಿರಂತರವಾಗಿ ಆಯ್ಕೆ ಆಗುತ್ತಾ ಬಂದರು ಸಹ ಒಮ್ಮೆಯೂ ಅಖಂಡವಾಗಿರುವ ಉತ್ತರಕನ್ನಡವನ್ನ ಇಬ್ಬಾಗ ಮಾಡುವ ಬಗ್ಗೆ ಎಲ್ಲಿಯೂ ಕೂಡ ಧ್ವನಿ ಎತ್ತಲಿಲ್ಲ. ಅವರು ಕೇವಲ ಹಿಂದೂತ್ವದನ್ನ ಗಟ್ಟಿಯಾಗಿಡಬೇಕು ಎನ್ನುವ ಬಗ್ಗೆ ಗಟ್ಟಯಾದ ಧ್ವನಿಯಲ್ಲಿ ಯೇ ಮಾತನಾಡಿಕೊಂಡು ಬರುತ್ತಿದ್ದಾರೆ‌. ಹೀಗಾಯೇ ಜಿಲ್ಲೆಯ ಬಹುತೇಕ ಜನ ಇಂದಿಗೂ ಅನಂತಕುಮಾರ ಹೆಗಡೆ ಅವರನ್ನ ಮೆಚ್ಚಿಕೊಂಡು ಬಂದಿದ್ದಾರೆ.