ಸುದ್ದಿಬಿಂದು ಬ್ಯೂರೋ
ಗೋಕರ್ಣ :ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಪ್ರವಾಸಕ್ಕೆ ಬಂದು ನಾಪತ್ತೆ ಆಗಿರುವ ಜಪಾನ್ ಮಹಿಳೆ‌ ಸುರಕ್ಷಿತವಾಗಿರುವ ಬಗ್ಗೆ ಪತಿಗೆ ಇಮೇಲ್ ಮಾಡಿದ್ದಾಳೆ.

ಕಳೆದ ಕೆಲದ ದಿನಗಳ ಹಿಂದೆ ಜಪಾನ್ ದಂಪತಿಗಳು ತಿರುವನಂತಪುರದಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಇವರು ಬಂಗ್ಲೆಗುಡ್ಡೆಯ ವಸತಿ ಗೃಹದಲ್ಲಿ ವಾಸವಾಗಿದ್ದರು.ಆದರೆ ವಸತಿ ಗೃಹದಲ್ಲಿದ್ದ ಮಹಿಳೆ ಎಮಿ ಯಮಾಝಕಿ(54) ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಳು.

ಬಳಿಕ ಆಕೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಸಿಪಿಐ ವಸಂತ ಆಚಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನ ರಚಿಸಿ ಖಚಿತ ಮಾಹಿತಿ ಮೇರೆಗೆ ಗೋಕರ್ಣ ಪೊಲೀಸರ ತಂಡ ಕೇರಳದ ತಿರುವನಂತಪುರಕ್ಕೆ ತೆರಳಿದ್ದಾರೆ.ದಂತಿಗಳ ನಡುವೆ ಮನಸ್ತಾಪವೇ ನಾಪತ್ತೆಗೆ ಕಾರಣ ಎನ್ನಲಾಗಿದೆ