ಕುಮಟಾ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿದ್ದು, ಈ ಹಿನ್ನಲೆಯಲ್ಲಿ ಪಟ್ಟಣ ದೇವಕಿ ಕೃಷ್ಣ ಕಾನ್ಫರೆನ್ಸ್ ಹಾಲ್ ನಲ್ಲಿ ನೂತನ ಜೆಡಿಎಸ್ ಕಚೇರಿಯನ್ನ ಜೆಡಿಎಸ್ ಮುಖಂಡರುಗಳು ಉದ್ಘಾಟಿಸಿದ್ದರು.

ಕುಮಟಾ ಪಟ್ಟಣದ ಗಿಬ್ ಸರ್ಕಲ್ ಬಳಿ ಇರುವ ದೇವಕಿ ಕೃಷ್ಣ ಕಾನ್ಫರೆನ್ಸ್ ಹಾಲ್ ಆರಂಭವಾದ ಜೆಡಿಎಸ್ ಕಚೇರಿಯಲ್ಲಿ ಕುಮಟ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ದಂಪತಿಗಳು ನೂತನ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ನೂರಾರೂ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ಜೆಡಿಎಸ್ ಕುಮಟಾ ತಾಲೂಕಾ ಅಧ್ಯಕ್ಷ ಸಿ ಜೆ ಹೆಗಡೆ, ಹೊನ್ನಾವರ ತಾಲೂಕಾಧ್ಯಕ್ಷ ಪಿ ಟಿ ನಾಯ್ಕ, ಹಿರಿಯ ಧುರೀಣ ಜಿ ಕೆ ಪಟಗಾರ ಕಾಗಲ, ಬಾಡ ಗ್ರಾಮ ಪಂ ಸದಸ್ಯ ದತ್ತಾ ಪಟಗಾರ , ವಸಂತ ಗೌಡ ಅಘನಾಶಿನಿ, ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.

ಒಮ್ಮೆ ಅವಕಾಶ ನೀಡಿ

ನಾನು ಈ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಎಲ್ಲಾ ಸಮಾಜದವರ ಸಹಕಾರದೊಂದಿದೆ ಸಾಮಾಜಿಕ ಕಾರ್ಯ ಹಾಗೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನೆರೆ ಪ್ರವಾಹ, ಕರೋನಾ ಸಂದರ್ಭ ಸೇರಿದಂತೆ ಎಲ್ಲಾ ಕಷ್ಟದ ದಿನದಲ್ಲೂ ನಾನು ಕ್ಷೇತ್ರದ ಪ್ರತಿಯೊಂದು ಸಮಾಜದ ಜನರ ಜೊತೆ ನಿಂತಿಕೊಂಡು ಬಂದಿದ್ದೇನೆ.‌

ಎಲ್ಲರನ್ನ ಒಗ್ಗೂಡಿಸಿಕೊಂಡು ಹೋಗುವ ಮೂಲಕ ಕುಮಟಾ-ಹೊನ್ನಾವರ ಕ್ಷೇತ್ರವನ್ನ ಮಾದರಿ ಕ್ಷೇತ್ರ ವನ್ನಾಗಿ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ವಿನಂತಿಸಿಕೊಂಡಿದ್ದಾರೆ.