ಸುದ್ದಿಬಿಂದು ಬ್ಯೂರೋ
ಕುಮಟಾ :
ಸೂರಜ್‌ ನಾಯ್ಕ‌ಅವರು ತಮ್ಮ‌ ಮಾತಿನಲ್ಲಿ ಪದೆ ಪದೆ‌‌ ಹೇಳಾತ್ತಾ ಇದ್ದರು ಕುಮಾರಣ್ಣ ಮನಸ್ಸು ಮಾಡಿದ್ದರೆ ತಾನು ಗೆಲ್ಲಲು ಸುಲಭವಾಗುತ್ತದೆ ಎಂದು ಏನು ಹೇಳುತ್ತಿದ್ದಾರೆ.ಇದರಲ್ಲಿ ನನ್ನದೇನು ಇಲ್ಲ. ಕ್ಷೇತ್ರದ ಜನರೆ ಈ ಬಾರಿ ಸೂರಜ್ ನಾಯ್ಕ ಅವರನ್ನ ಶಾಸಕರನ್ನಾಗಿ ಮಾಡಬೇಕು ಎಂದು ಮನಸ್ಸು ಮಾಡಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದರು.

ಪಟ್ಟಣದ ಮಣಕಿ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ ಅವರು..ನಿಮ್ಮ ಸೂರಜ್ ನಾಯ್ಕ ಅವರು ಇಂದಿನಿಂದ ನಿಮ್ಮಗೆಲ್ಲರಿಗೂ ಪರಿಚಿತರಾದವರಲ್ಲ, ಕಳೆದ ಎರಡು ದಶಕದಿಂದ ಅವರ ಸಂಕಷ್ಟವನ್ನೆಲ್ಲಾ ಒದಿಗಿಟ್ಟು ನಿಮ್ಮ‌ ಕಷ್ಟಕ್ಕೆ ನೆರವಾಗಿದ್ದಾರೆ. ಓರ್ವ ಜನಪ್ರತಿನಿಧಿಯಿಂದಲ್ಲೂ ಸಾಧ್ಯವಾದಷ್ಟು ಕೆಲಸವನ್ನ ಸೂರಜ್ ಕ್ಷೇತ್ರದಲ್ಲಿ ಮಾಡಿಕೊಂಡು ಬಂದಿರುವುದು ನನ್ನಗಿಂತ ನಿಮ್ಮಗೆ ಚೆನ್ನಾಗಿ ಗೋತ್ತಿದೆ.ಒಮ್ಮೆ ನೀವು ನಿಮ್ಮ‌ಮನೆ ಮಗನನ್ನ ಗೆಲ್ಲಿಸಿಕೊಂಡು ಬರತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಕುಮಾರಸ್ವಾಮಿ ವಿಶ್ವಾಸದಿಂದ ಹೇಳಿದರು.

ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುವುದಕ್ಕಿಂತ ಮೊದಲ ಸಿಲೆಂಡರ್ ಬೆಲೆ ತುಂಬಾ ಕಡಿಮೆಯಾಗಿತ್ತು. ಆದರೆ ಈಗ ಎರಡು ಪಟ್ಟು ಹೆಚ್ಚಾಗಿದೆ. ನಮ್ಮ ಸರಕಾರ ರಚನೆ ಆದ್ರೆ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ವರ್ಷಕ್ಕೆ ಐದು ಸಿಲೆಂಡರ್ ಉಚಿತವಾಗಿ ನೀಡಲಾಗುವುದು,ಈಗ ನೀಡಲಾಗುತ್ತಿದ್ದ ವೃದ್ಧಾಪ್ಯ ಮಾಸಾಸನವನ್ನ ಹೆಚ್ಚಿಸಲಾಗುವುದು,‌ಮೀನುಗಾರ ಸಮಸ್ಯೆ ಏನಿದೆ ಅದನ್ನ ತಕ್ಷಣದಲ್ಲಿ ಬಗೆಹರಿಸಲಾಗುವುದು.

ಇನ್ನೂ ಜಿಲ್ಲೆಯಲ್ಲಿರುವ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಏನಿದೆ ಅದನ್ನ ಶೀಘ್ರದಲ್ಲಿ ಬಗೆಹರಿಸಲಾಗುವುದು. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕೊಳ್ಳುತ್ತಿವಾಗಲೆ ಕಾರಣಾಂತರದಿಂದ ಅಧಿಕಾರವನ್ನ ಕಳೆದುಕೊಳ್ಳುವಂತಾಯಿತು. ಅದೇನೆ ಇರಲಿ ಈ ಬಾರಿ ಐದು ವರ್ಷ ಪೂರ್ಣಾವಧಿಗೆ ನಮ್ಮ ಸರಕಾರ ಬರಲಿದೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದಿದ್ದಾರೆ‌.

ಇದಕ್ಕೂ ಮುನ್ನ ಮಾತನಾಡಿದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು. ನಾನು ಶಾಸಕನಾದರೆ ಮೊದಲು ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಲಾಗುವುದು. ಹೊಳೆಗದ್ದೆಯ ಟೋಲ್ ಮೂಲಕ ವಾಹನ ಸವಾರರಿಂದ ಕಾನೂನು ಬಾಹಿರ ರೀತಿಯಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಕುಮಾರಣ್ಣ ಮುಖ್ಯಮಂತ್ರಿ ಆದ ಒಂದೆ ವಾರದಲ್ಲಿ ಅದನ್ನ ನಿಲ್ಲಿಸಲಾಗುವುದು, ಮೀನುಗಾರರಿಗೆ ಅನೂಕುಲಕರವಾಗಿರುವ ಯೋಜನೆಯನ್ನ ತರುವ ಮೂಲಕ ಇಷ್ಟು ವರ್ಷದ ನಮ್ಮ ಮೀನುಗಾರರ ಸಮಸ್ಯೆ ಶಾಶ್ವತವಾಗಿ ಪರಿಹಾರ ಒದಗಿಸಲಾಗುವುದು.ಇಷ್ಟು ವರ್ಷಗಳ ಕಾಲ ನಾನು  ನನ್ನ ಎಲ್ಲಾ ಕಷ್ಟವನ್ನ ಬದಿಗಿಟ್ಟು ನನ್ನ‌ ಜನರ ಕಷ್ಟಕ್ಕೆ ನಿಂತಿದ್ದೇ‌ನೆ. ಈ ಬಾರಿ ನೀವೆಲ್ಲಾ ಆಯ್ಕೆ ಮಾಡುತ್ತಿರಿ ಎನ್ನುವ ವಿಶ್ವಾಸ ಇದೆ ಎಂದರು..

ಈ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಸಹಸ್ರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಸೂರಜ್ ನಾಯ್ಕ ಅಭಿಮಾನಿಗಳು ಆಗಮಿಸಿದ್ದರು..