ಸುದ್ದಿಬಿಂದು ಬ್ಯೂಸ್ ಬ್ಯರೋ
ಶಿರಸಿ : ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಕುಮಾರಸ್ವಾಮಿ ಎದುರಲ್ಲೆ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಶಿರಸಿ ನಗರದಲ್ಲಿ ನಡೆದಿದೆ..
ಕುಮಾರಸ್ವಾಮಿ ಅವರು ನಗರದ ಹಾಲಿಪ್ಯಾಡೆಗೆ ಆಗಮಿಸಿದ ವೇಳೆ ವ್ಯಕ್ತಿ ಓರ್ವ ಪಿಕ್ ಪಾಕೇಟ್ ಮಾಡಿದ್ದಾನೆ,ಕುಮಾರಸ್ವಾಮಿ ಅವರು ಶಿರಸಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಉಪೇಂದ್ರ ಪೈ ಅವರ ಪರ ಪ್ರಚಾರಕ್ಕಾಗಿ ಕುಮಾರಸ್ವಾಮಿ ಅವರು ಎಂಇಎಸ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮೈದಾನದ ಹೆಲಿಪ್ಯಾಡಗೆ ಆಗಮಿಸಿದ್ದರು. ಈ ವೇಳೆ ಅಲ್ಲೆ ಇದ್ದ ಜೆಡಿಎಸ್ ಮುಖಂಡರೊಬ್ಬರ ಜೆಬಿನಿಂದ ಹಣ ಕಳ್ಳತನ ಮಾಡಲಾಗಿದೆ. ಆತ ಕಳ್ಳತನ ಮಾಡುತ್ತಿರುವುದನ್ನ ಗಮನಿಸಿದ ಜೆಡಿಎಸ್ ಕಾರ್ಯಕರ್ತರು.
ತಕ್ಷಣ ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಈತ ಹಾನಗಲ್ ಮೂಲಕ ಹಾನಗಲ್ ಮೂಲದ ಹೆಜ್ಜಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಶಿರಸಿ ನಗರದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.