ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕುಮಟಾ ಕಾಂಗ್ರೆಸ್ ಇಂಟಕ್ ಬ್ಲಾಕ್ ಅಧ್ಯಕ್ಷರನ್ನಾಗಿ ಖ್ಯಾತ ಯಕ್ಷಗಾನ ಭಾಗವತ ಜಿ. ಎಲ್. ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಉತ್ತರ ಕನ್ನಡದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ ಅವರ ಸೂಚನೆಯಂತೆ ಕುಮಟಾ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗವತ್ ಅವರ ಅನುಮೋದನೆಯಂತೆ ಕುಮಟಾ ಇಂಟಕ್ ವಿಭಾಗದ ಬ್ಲಾಕ್ ಅಧ್ಯಕ್ಷರನ್ನಾಗಿ ಕೂಜಳ್ಳಿ ನಿವಾಸಿ ಹಾಲಿ ಬಗ್ಗೋಣದಲ್ಲಿರುವ ಗಜಾನನ ಲಕ್ಷ್ಮಣ ನಾಯ್ಕ ಇವರನ್ನು ಆಯ್ಕೆ ಮಾಡಲಾಗಿದೆ.

ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿಯೂ ತಮ್ಮ ಛಾಪು ಮೂಡಿಸಿರುವ ಗಜಾನನ ಲಕ್ಷ್ಮಣ ನಾಯ್ಕ ಇವರು ಜಿ. ಎಲ್. ನಾಯ್ಕರೆಂದೇ ಖ್ಯಾತ ನಾಮರಾಗಿದ್ದಾರೆ. ಕಳೆದ 25 ವರ್ಷದಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಜಿ. ಎಲ್. ನಾಯ್ಕರು ಹಿಂದಿನ ಎಂ.ಎಲ್.ಎ. ಚುನಾವಣೆಯ ಅಭ್ಯರ್ಥಿ ನಿವೇದಿತ್ ಆಳ್ವರ ಪರವಾಗಿ ಕುಮಟಾ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯ ಮಾಡಿದ್ದು, ಇವರು 17 ವರ್ಷ ಕೂಜಳ್ಳಿ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಘಟಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2 ಅವಧಿಗೆ ಕೂಜಳ್ಳಿ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಇವರಿಗೆ ಇದೀಗ ಕುಮಟಾ ಇಂಟಕ್ ವಿಭಾಗದ ಬ್ಲಾಕ್ ಅಧ್ಯಕ್ಷ ಹುದ್ದೆ ಲಭಿಸಿದೆ.

ಗಮನಿಸಿ