ಸುದ್ದಿಬಿಂದು ಬ್ಯೂರೋ ವರದಿ
ಜೊಯಿಡಾ: ತಾಲೂಕಿನ ಕಾಳಿ ಹುಲಿ ಯೋಜನೆಯ ಅಣಶಿ ವನ್ಯ ಜೀವಿ ವಲಯ ವ್ಯಾಪ್ತಿಯ ಲಾಂಡೆ ಗ್ರಾಮದ ರೈತ 65 ವರ್ಷ ವಯಸ್ಸಿನ ಅರ್ಜುನ್ ಪುನೊ ವೇಳಿಪ ಎಂಬವರ ಮೇಲೆ ಕರಡಿ ದಾಳಿಯಾಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ
.

ಲಾಂಡೆ ಗ್ರಾಮದ ರೈತ ಅರ್ಜುನ ಪುನೊ ವೇಳಿಪ ಅವರು ಇಂದು ಬೆಳಿಗ್ಗೆ ತಮ್ಮ ಜಮೀನಿಗೆ ಹೋಗುತ್ತಿದ್ದಾಗ ಕರಡಿಯೊಂದು ದಾಳಿ ಮಾಡಿದೆ. ದಾಳಿಯ ಸಂದರ್ಭದಲ್ಲಿ ಕಣ್ಣು ಕಿತ್ತು ತೆಗೆದಿದೆ. ಮುಖದ ಭಾಗಕ್ಕೆ ಪರಚಿದೆ. ಎದೆಗೆ ಪರಚಿ ಹೊಟ್ಟೆ ಭಾಗಕ್ಕೆ ಗಾಯಮಾಡಿದೆ. ಮರ್ಮಾಂಗಕ್ಕೂ ಗಾಯವಾಗಿದ್ದು, ಅರ್ಜುನ ಪುನೊ ವೇಳಿಪ ಅವರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಗಂಭೀರ ಗಾಯಗೊಂಡ ಅರ್ಜುನ ಅವರಿಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಅಣಶಿ ವಲಯ ಅರಣ್ಯಾಧಿಕಾರಿ ಗಣರಾಜ ಪಟಗಾರ ಚಿಕಿತ್ಸೆಯ ನೇತೃತ್ವ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಮನಿಸಿ