Hassan: ಹಾಸನ: ಮನೆಯೊಳಗೆ ಬೆಡ್ ರೂಂನಲ್ಲಿ ಮಲಗಿದ್ದ ವೇಳೆ ವ್ಯಕ್ತಿ ಕಾಲಿಗೆ ಹಾವು ಕಚ್ಚಿ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಹಾಸನ ಹೊರ ವಲಯದ ಬೂವನಹಳ್ಖಿಯಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲ್ಲೂಕು ಮೂಲದ ಗುರು (40) ಸ್ಥಳದಲ್ಲೇ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ. ಇವರು ರಾತ್ರಿ ಊಟ ಮಾಡಿ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ಮಲಗಿದ್ದರು. ಕೆಳಗಿನಿಂದ ಮೊದಲ ಮಹಡಿ ಹತ್ತಿದ್ದ ನಾಗರ ಹಾವು ಕಚ್ಚಿದೆ.‌ಪತಿ ಬೆಳಿಗ್ಗೆ 8 ಗಂಟೆ ಆದರೂ ಕೊಠಡಿ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಪತ್ನಿ ಕೊಠಡಿ ಬಾಗಿಲು ತೆರೆದಾಗ ಮಲಗಿದ್ದಲ್ಲೆ ಪತಿ ಸಾವನ್ನಪ್ಪಿರುವುದನ್ನ ಕಂಡ ಪತ್ನಿ ಗಾಂಬರಿಗೊಂಡಿದ್ದಾರೆ.

ಪತಿ‌ ಹೇಗೆ ಸಾವನ್ನಪ್ಪಿದ್ದರು ಎನ್ನುವುದು ಪತ್ನಿ ಆಶ್ಚರ್ಯಕ್ಕೆ ಒಳಗಾಗಿದ್ದರು. ಕೊಠಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪತಿ‌ ಮಲಗಿದ್ದ‌ ಪಕ್ಕದಲ್ಲೇ ನಾಗರ ಹಾವು ಇರುವುದನ್ನ ಗಮನಿಸಿದ್ದಾರೆ. ಬಳಿಕ ಉರಗ ತಜ್ಞರನ್ನ ಕರೆಸಿ ಕೊಠಡಿಯಲ್ಲಿದ್ದ‌ ನಾಗರ ಹಾವನ್ನ ರಕ್ಷಿಸಲಾಗಿದೆ. ಮನೆಯ ಯಜಮಾನನ ಹಠಾತ್ ಸಾವಿನಿಂದ ಕುಟುಂಬಸ್ಥರು ಕಂಗೆಟ್ಟಿದ್ದಾರೆ.

ಗಮನಿಸಿ