ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್ ಸೇರಿದಂತೆ ಕೆಲ ನಿರ್ಧಿಷ್ಠ ಪ್ರದೇಶದಲ್ಲಿ ಅಕ್ರಮ ಕೆಂಪು ಚಿರೆಕಲ್ಲಿ ದಂಧೆಯಿಂದಾಗಿ ಕಾಣಿನಂಚಿನಲ್ಲಿರುವ ಮಿರ್ಜಾನದಂತಹ ಕಲ್ಲು ಗಣಿ ಹೊಂಡದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಿರುವ ಬಗ್ಗೆ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಮಿರ್ಜಾನ ಭಾಗದಲ್ಲಿ ಅಂತೂ “ಆಗ್ನೇನಲ್ಲ”,ಪೂರ್ವ,ಪಶ್ಚಿಮದಲ್ಲಿರುವ ಬೆಲೆ “ಬಾಳುವ” ಭೂಮಿಯನ್ನ ಅಗೆದು ಕೋಟಿ ಕೋಟಿ ಬೆಲೆಯ ಕೆಂಪು ಚಿರೆಕಲ್ಲು ತೆಗೆದು ಸರಕಾರಕ್ಕೆ ಒಂದು ಪೈಸೆ ಹಣವನ್ನು ಸಹ ಭರಣ ಮಾಡದೆ ಅಕ್ರಮವಾಗಿ ಕಲ್ಲು ದಂಧೆ ಮಾಡಲಾಗುತ್ತಿದೆ. ಖಾಸಗಿ ಜಾಗ ಇದೆ ಎಂದು ಮನಸ್ಸಿಗೆ ಬಂದ ಹಾಗೆ ಯಾರೂ ಅಕ್ರಮ ದಂದೆ ಮಾಡುವ ಕಾನೂನು ಇಲ್ಲ..ಆದರೂ ಮಿರ್ಜಾನ,ಮೂರೂರು, ಹೊನ್ನಾವರ ಹಾಗೂ ಬನವಾಸಿ ಸೇರಿದಂತೆ ಜಿಲ್ಲೆಯ ಅನೇಕ ಕಡೆಯಲ್ಲಿ ಈ ಚಿರೆಕಲ್ಲು ದಂದೆ ನಡೆಸಲಾಗುತ್ತಿದೆ.
ನಲವತ್ತರಿಂದ ಐವತ್ತು ಆಳದವರೆಗೆ ಭೂಮಿಯನ್ನ ಕೊರೆದು ಕಲ್ಲು ತೆಗೆಯಲಾಗುತ್ತಿದೆ.ಅದು ಎಷ್ಟೊ ಕಡೆಯಲ್ಲಿ ಕಲ್ಲು ತೆಗೆದ ಹೊಂಡವನ್ನ ಹಾಗೆ ಬಿಡಲಾಗಿದ್ದು,ಇದರಿಂದಾಗಿ ಅಪರೂಪದ ಕಾಡು ಪ್ರಾಣಿಗಳು ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಉದಾರಣೆ ಇದೆ. ಅಷ್ಟೆ ಅಲ್ಲದೆ ಕಲ್ಲು ಗಣಿ ಇಲ್ಲಿ ಬಿದ್ದು ಸಾವನ್ನಪ್ಪಿದ ಕಾಡು ಪ್ರಾಣಿಗಳನ್ನ ಬೇರೆಡೆ ಸಾಗಾಟ ಕೂಡ ಮಾಡ ಹಣಕ್ಕಾಗಿ ಮಂಸವನ್ನ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಸಹ ಚಿರೆಕಲ್ಲು ಗಣಿಗಾರಿಗೆ ಇರುವ ಸುತ್ತಮುತ್ತಲಿನ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಒಂದು ಅಕ್ರಮ ದಂಧೆಯಿಂದಾಗಿ ಸಾಕಷ್ಟು ಅವಾಂತರಗಳು ನಡೆಯುತ್ತಿದೆ. ಈ ಎಲ್ಲದರ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಇಲ್ಲದೆ ಹೋದಲ್ಲಿ ಇನಷ್ಟು ಅನಾಹುತ ಉಂಟಾಗುವುದರದಲ್ಲಿ ಎರಡು ಮಾತಿಲ್ಲ.
ಗಮನಿಸಿ