ಸುದ್ದಿಬಿಂದು ಬ್ಯೂರೋ
ನವದೆಹಲಿ
: ಪ್ರಧಾನಮಂತ್ರಿ ‌ನರೇಂದ್ರ ಮೋದಿ ಅವರ ದೆಹಲಿಯ ನಿವಾಸದ ಮೇಲೆ ಇಂದು ಬೆಳಗಿನ ಜಾವದಲ್ಲಿ ದ್ರೋಣ ಕ್ಯಾಮರಾ ಹಾರಾಟ ನಡೆಸಿದ್ದು, ದೆಹಲಿ ಪೊಲೀಸರು ದ್ರೋಣ ಹಾರಾಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ವಾಸವಿರುವ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿಗಳ ನಿವಾಸದ ಮೇಲೆ ಇಂದು ಬೆಳಗಿನ ಜಾವ ದ್ರೋಣ್ ಹಾರಾಟ ಮಾಡಿರುವುದರನ್ನ ಮೋದಿ ಅವರ ಭದ್ರತೆಗಾಗಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿಗಳು ಗಮನಿಸಿದ್ದಾರೆ. ಇದನ್ನ ಗಮನಿಸಿದ ಭದ್ರತಾ ಅಧಿಕಾರಿಗಳು ತಕ್ಷಣ ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಆದರೆ ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದು,ಇದುವರಗೆ ಮೋದಿ ಅವರ ಮನೆ‌ ಮೇಲೆ ಹಾರಾಟ ನಡೆಸಿರುವ ದ್ರೋಣ ಪತ್ತೆಯಾಗಿಲ್ಲ ಎನ್ನಲಾಗಿದೆ. ದೇಶದ ಪ್ರಧಾನಿ ಮೋದಿ ಅವರ ನಿವಾಸವು ನೋ ಫೈ ಝನ್ ಅಥವಾ ದ್ರೋಣ್ ರೋನ್ ಅಡಿ ಒಳಪಡುತ್ತದೆ.ಹೀಗಾಗಿ ಇಲ್ಲಿ ಯಾವ ಕಾರಣಕ್ಕೂ ದ್ರೋಣ ಹಾರಾಟ ಮಾಡುವಂತಿಲ್ಲ. ಸಾಕಷ್ಟು ಭದ್ರತೆ ಇರುವಾಗಲು ಸಹ ಇದೀಗ ಮೋದಿ ನಿವಾಸದ‌ ಮೇಲೆ ದ್ರೋಣ ಹಾರಾಟ ಮಾಡಿರುವುದು ಭದ್ರತಾ ಅಧಿಕಾರಿಗಳಿಗೆ ತಲೆನೋವಾಗಿದೆ.