ಸುದ್ದಿಬಿಂದು ಬ್ಯೂರೋ
ಕಾರವಾರ
: ಆರಂಭದಲ್ಲಿ ಮುಂಗಾರು ಮಳೆ ಮುಗಿಸಿಕೊಂಡಿದ್ದು, ಕೆಲ‌ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ, ಜೂಲೈ 4 ರಿಂದ 7ರ ತನಕ ಭಾರೀ ಮಳೆಯಾಗಲಿದ್ದು ಉತ್ತರಕನ್ನಡದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜಿಲ್ಲೆಯ ಹೊನ್ನಾವರ, ಕುಮಟ, ಯಲ್ಲಾಪುರ, ಅಂಕೋಲಾದಲ್ಲಿ ಭಾರೀ ಮನೆಯಾಗುತ್ತಿದ್ದು,ನಾಳೆಯಿಂದ (ಜು.4)ರಿಂದ ಜಿಲ್ಲಾದ್ಯಂತ ಭಾರೀ ಮಳೆ‌ ಸುರಿಯಲಿದೆ.‌ ಮಳೆ ಆರಂಭವಾದ ಹಿನ್ನಲೆಯಲ್ಲಿ‌ ರೈತರು ಈಗಷ್ಟೆ‌ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು,ಇನ್ನೂ ಕೂಡ ಬೀಜ ಬಿತ್ತನೆ‌ ಕಾರ್ಯ‌ಮುಂದುವರೆದಿದೆ.

ಭಾರೀ‌ ಮಳೆ ಸುರಿಯಲಿರುವ ಹಿನ್ನಲೆಯಲ್ಲಿ ಕರಾವಳಿ ಕಡಲ ತೀರಕ್ಕೆ ಯಾರು ಇಳಿಯದಂತೆ ಮುನ್ಸೂಚನೆ ನೀಡಲಾಗಿದ್ದು, ‌ಸಾಂಪ್ರದಾಯಕ ಮೀನುಗಾರಿಕೆಗೆ ನಡೆಸುವವರಿಗೂ ಸಹ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಜೂಲೈ 2ರಿಂದಲ್ಲೆ ಜಿಲ್ಲೆಯಲ್ಲಿ‌‌ ಮಳೆ ಜೋರಾಗಿದ್ದು, ಇದೆ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.