Assault by a member of the Municipal Council
suddibindu.in
Sirsi:ಶಿರಸಿ : ಕುಡಿದ ಮತ್ತಲ್ಲಿ ನಗರಸಭಾ ಸದಸ್ಯ ನೋರ್ವ ವ್ಯಕ್ತಿ ಓರ್ವನಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಯಾತ್ರಿ ನಿವಾಸದ ಬಳಿ ನಡೆದಿದೆ.
ಶಿರಸಿಯ ಬೋವಿ ವಡ್ಡರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಲ್ಲಿ ನಗರಸಭೆ ಸದಸ್ಯ ಯಶವಂತ್ ಮರಾಠೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೆ ಒಳಗಾದ ವ್ಯಕ್ತಿ ಹಾಗೂ ಹಲ್ಲೆ ಮಾಡಿದ ಇಬ್ಬರೂ ಕೂಡ ಒಂದೆ ಹೊಟೆಲ್ ನಲ್ಲಿ ಮದ್ಯಪಾನ ಮಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು.ಗಲಾಟೆ ನಡೆದಿದೆ.
ಘಟನೆ ಬಗ್ಗೆ ಶಿರಸಿ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.