Distribution of condom packets with the name of the party..?
suddibindu.in
Condom Packets : ಚುನಾವಣಾ ಸಂದರ್ಭದಲ್ಲಿ ಎಲ್ಲಾ ಪಕ್ಷಗಳೂ ಸಹ ಮತದಾರರನ್ನ ಸೆಳೆಯಲು ಒಂದಲ್ಲ ಒಂದದು ತಂತ್ರಗಾರಿಕೆ ಮಾಡುತ್ತೆ. (Voters attract) ಆದರೆ ಈ ರಾಜ್ಯದಲ್ಲಿ ರಾಜಕೀಯ ಪಕ್ಷಗಳು (Political party’s) ಹೊಸ ತಂತ್ರವನ್ನು ಹೆಣೆದಿವೆ. ಲೋಕಸಭಾ ಚುನಾವಣೆ (MP election) ಸಮಯದಲ್ಲಿ ಕಾಂಡೋಮ್‌ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶದಲ್ಲಿ (Andrea Pradesh) ಕಾಂಡಮ್ ಕಿಟ್ ಗಳ ಮೇಲೆ ಪಕ್ಷಗಳ ಹೆಸರನ್ನು ಹಾಕಿ ಹಂಚಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ (Social media) ವೀಡಿಯೋ ಹರಿದಾಡುತ್ತಿದೆ‌.

ಇದನ್ನೂ ಓದಿ : ಕುಮಟಾ ಸಮೀಪ ಆಳ ಸಮುದ್ರದಲ್ಲ ಚೀನಾ ಬೋಟ್ ಪತ್ತೆ

ವೈಎಸ್‌ಆರ್ (YSR congress) ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷ ತೆಲುಗು ದೇಶಂ (TDP) ಪಕ್ಷದ ನಾಯಕರು ತಮ್ಮ ಪಕ್ಷದ ಚಿಹ್ನೆಗಳನ್ನು ಒಳಗೊಂಡ ಕಾಂಡೋಮ್‌ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ (Viral) ಆಗಿದ್ದು, ಕಾಂಡೋಮ್ ಪ್ಯಾಕ್‌ಗಳನ್ನು ಎರಡೂ ಪಕ್ಷಗಳ ಚಿಹ್ನೆಗಳೊಂದಿಗೆ ಗುರುತಿಸಲಾಗಿದೆ,

ವೀಡಿಯೋದಲ್ಲಿ ವ್ಯಕ್ತಿಯೊಬ್ಬ (A man) ಕಾಂಡೋಮ್‌ಗಳನ್ನು ಏಕೆ ವಿತರಿಸಲಾಗುತ್ತಿದೆ ಎಂದು ಕೇಳಿದಾಗ, ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು (Money) ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಉತ್ತರಿಸಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.