suddibindu.in
ಕುಮಟಾ : ತಾಲೂಕಿನ ಯಾಣದ ಭೈರವೇಶ್ವರ ಶಿಖರದ ಬಳಿ ಗುಡ್ಡ ಕುಸಿದಿದ್ದು ಹಾಗೂ ಮೂರು ಅಂಗಡಿಗಳ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದೆ.ಇನ್ನೂ ಸ್ವಲ್ಪ ದಿನಗಳಲ್ಲಿ ಮಣ್ಣು ತೆರುವು ಮಾಡಿಸುತ್ತೇವೆ ಪ್ರವಾಸಿಗರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಗಜು ಪೈ ತಿಳಿಸಿದ್ದಾರೆ.
ಸುಮಾರು ಅರ್ಧ ಎಕರೆ ದರೆ ಜರಿದಿದ್ದು, ಅಂಗಡಿಯೊಂದು ನಾಶವಾಗಿದೆ. ಶಿರಸಿ ಕಡೆಯಿಂದ ಬರುವ ದಾರಿ ಬಂದ್ ಆಗಿದೆ. ಪಾರ್ಕಿಂಗ್ ಸ್ಥಳದಿಂದ ಗಣಪತಿ ದೇವಸ್ಥಾನದವರೆಗೆ ನೀರು ಹರಿಯುವ ಪೈಪ್ ಗಳು ಮುಚ್ಚಿದ್ದು, ನೀರು ರಸ್ತೆಯಲ್ಲಿ ಹರಿಯುತ್ತದೆ.
ಇದನ್ನೂ ಓದಿ
- ಕಲ್ಲಮಠದ ಜೀರ್ಣೋದ್ಧಾರ ಸಮಿತಿಗೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ 5ಲಕ್ಷ ದೇಣಿಗೆ
- ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ
- ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಮಕ್ಕಳ ರಕ್ಷಣೆ:ಗೋಕರ್ಣದಲ್ಲಿ ಅಚ್ಚರಿ ಘಟನೆ
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸುಮಾರು 150 ಮೀಟರ್ ದೂರದಿಂದಲೇ ವೀಕ್ಷಣೆಗೆ ಅನುವು ಮಾಡಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಕುಮಟಾ ಶಾಸಕರು ದಿನಕರ ಶೆಟ್ಟಿ ಹಾಗೂ ಸಂಸದರಾದ ಕಾಗೇರಿ ಅವರಿಗೂ ಮನವಿ ಮಾಡಿಕೊಂಡಿದ್ದು ಆದಷ್ಟು ಬೇಗ ಮಣ್ಣು ತೆರವು ಶಾಶ್ವತ ರಸ್ತೆ ಮಾಡಿಕೊಡಿ ಹೇಳಿದ್ದೇವೆ ಎಂದರು