ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರಗೆ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ನಡೆದಿದೆ.

ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವುದನ್ನ ಗಮನಿಸಿದ ಕಾರ ಚಾಲಕ ತಕ್ಷಣ ಹೊರಗಿಳಿದ್ದು, ಕಾರನಲ್ಲಿದ್ದವರನ್ನ ಹೊರಗಿಳಿಸಿದ್ದಾನೆ.ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ಕಾರಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ.

ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರು ಹೆದ್ದಾರಿ ಮಧ್ಯದಲ್ಲೇ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ದೆಹಲಿ ನೊಂದಣಿ ಹೊಂದಿದ್ದ ಕಾರು ಇದಾಗಿದ್ದು 2011ರ ಮಾಡೆಲ್‌ನದ್ದಾಗಿದೆ. ಇದೆ ರೀತಿ ಕೆಲ ದಿನಗಳ ಹಿಂದಷ್ಟೇ ಸುರತ್ಕಲ್ NITK ಸಮೀಪ ಬಿಎಂಡಬ್ಲ್ಯೂ ಕಂಪನಿಯ ಕಾರು ಸುಟ್ಟು ಭಸ್ಮವಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಿಸಿ