ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಕನ್ನಡ ಹೊರತುಪಡಿಸಿ ಅನ್ಯ ಭಾಷೆಯ ಚಿತ್ರಪ್ರದರ್ಶನಕ್ಕೆ ಹೆಚ್ಚು ಒತ್ತುನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಚಿತ್ರಮಂದಿರದ ಎದರುಗಡೆ ಪ್ರತಿಭಟನೆ‌ ನಡೆಸಲಾಯಿತು.

ಕರವೇ ಅಧ್ಯಕ್ಷ ಅಕ್ಷಯ್ ಎಸ್.ಬಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿತ್ರಮಂದಿರದ ಮಾಲೀಕರು ಕನ್ನಡ ಭಾಷಗೆ ಅವಮಾನ ಮಾಡುತಿದ್ದಾರೆ. ದುರುದ್ದೇಶ ಪೂರ್ವಕವಾಗಿ ಕಾರವಾರದ ಚಿತ್ರಪ್ರಿಯರ ಮೇಲೆ ತೆಲಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳನ್ನು ಹೇರಲಾಗುತ್ತಿದೆ ಎಂದು ಆರೋಪಿಸಿ ಚಿತ್ರ ಮಂದಿರ ಮಾಲಕರ ವಿರುದ್ಧ ಘೋಷಣೆ ಕೂಗಿದರು.

“ಇನ್ನೂ ಕನ್ನಡ ಚಿತ್ರಗಳಿಗೆ ಮಾನ್ಯತೆ ಕೊಡದ ಚಿತ್ರ ಮಂದಿರದ ಮಾಲೀಕರು ತಮಿಳು, ತೆಲಗು, ಹಿಂದಿ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಇದ್ದರೂ, ಅದನ್ನು ಪ್ರಸಾರ ಮಾಡದೇ ಮೂಲ ಭಾಷೆಯಲ್ಲಿಯೇ ಪ್ರಸರ ಮಾಡುವುದನ್ನು ಕ.ರ.ವೇ ಖಂಡಿಸಿತ್ತದೆ. ಒಂದೊಮ್ಮೆ ಚಿತ್ರಮಂದಿರದ ಮಾಲೀಕರು ನಮ್ಮ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡು ಕನ್ನಡ ಚಿತ್ರಪ್ರದರ್ಶನ ಮಾಡದೇ ಇದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ” ನೀಡಿದರು.

ಪ್ರತಿಭಟನೆಯ ಬಳಿಕ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಯವರ ಕಚೇರಿಗೆ ತೆರಳಿ ಗೀತಾಂಜಲಿ ಚಿತ್ರಮಂದಿರದ ಮಾಲೀಕರಿಂದ ಕನ್ನಡ ಭಾಷೆಯ ಮೇಲಾಗುತ್ತಿರುವ ದೌರ್ಜನ್ಯ ಸರಿಪಡಿಸಲು ನಿರ್ದೇಶನ ನೀಡುವಂತೆ ಮನವಿ ನೀಡಿದರು.

ಗಮನಿಸಿ