ಸುದ್ದಿಬಿಂದು ಬ್ಯೂರೋ
ಕಾರವಾರ: ಆಟವಾಡುತಿದ್ದ ಮಗು ಆಯಾತಪ್ಪಿ ನಗರಸಭಾ ಬಾವಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ. ಕಾರವಾರ ನಗರದ ಹರಿದೇವ ನಗರದಲ್ಲಿ ಇಂದು ಶನಿವಾರ ಮಧ್ಯಾಹ್ನ ಸಮಯದಲ್ಲಿ ನಡೆದಿದೆ.

ಸ್ತುತಿ (3) ಮೃತಪಟ್ಟ ಹೆಣ್ಣು ಮಗುವಾಗಿದ್ದು ಸೂರಜ್ ಬಂಟ್ ಹಾಗೂ ವಿನುತ ಎಂಬ ದಂಪತಿಗಳ ಮಗುವಾಗಿದ್ದು,ಗಣಪತಿ ಮೂರ್ತಿ ಎಂದು ಮಣ್ಣನ್ನ ಸಾರ್ವಜನಿಕ ಬಾವಿಯಲ್ಲಿ ಹಾಕಲು ಹೋಗಿದ್ದ ಮಗು ಆಯಾ ತಪ್ಪಿ ಬಾವಿಗೆ ಬಿದ್ದು ಘಟನೆ ನಡೆದಿದೆ.

ನಗರಸಭೆಯಿಂದ ತೆಗೆದ ಸಾರ್ವಜನಿಕ ಬಾವಿ ರಸ್ತೆ ಪಕ್ಕದಲ್ಲೇ ಇದ್ದು ಇದಕ್ಕೆ ಕಟ್ಟಿದ ಕಟ್ಟೆ ತುಂಬಾ ಕೆಳಮಟ್ಟದ್ದಾಗಿದ್ದು ಬಾವಿ ಕಟ್ಟೆಯನ್ನು ಎತ್ತರ ಕಟ್ಟದೇ ಇರುವುದೇ ಘಟನೆಗೆ ಕಾರಣವಾಗಿದೆ. ಇನ್ನು ಮನೆಯಲ್ಲಿದ್ದ ತಾಯಿ ಸಹ ನಿರ್ಲಕ್ಷ ಮಾಡಿ ಮಗುವನ್ನು ಆಟವಾಡಲು ಬಿಟ್ಟಿದ್ದು ಇದೀಗ ಮಗುವಿನ ಪ್ರಾಣವೇ ಹೋಗುವಂತಾಗಿದೆ. ಇನ್ನೂ ಮಗು ಕಳೆದುಕೊಂಡ ಪೋಷಕರ‌ ಆಕ್ರಂದನ ಮುಗಿಲು ಮುಟ್ಟಿದೆ.