Suddibindu Bureau
ಹೊನ್ನಾವರ : ರಾತ್ರಿವೇಳೆ ಮರಳು ದಿಬ್ಬದ ಮೇಲೆ ಮಲಗಿದ್ದ ಕಾರ್ಮಿನ ಯುವಕನೋರ್ವನ ಮೇಲೆ ಮರಳು(sand)ಟಿಪ್ಪರ್ ಹರಿದು ಕಾರ್ಮಿಕ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮಾವಿನಕುರ್ವಾದಲ್ಲಿ ನಡೆದಿದೆ.
ದರ್ಶನ್ ಗೌಡ ಎಂಬಾತನೆ ಮೃತಪಟ್ಟಿರುವ ಕಾರ್ಮಿಕನಾಗಿದ್ದಾನೆ. ಈತ ಮರಳು ತೆಗೆಯುವ ಕೆಲಸ ಮಾಡುತ್ತಿದ್ದು, ರಾತ್ರಿ ಸಮಯದಲ್ಲಿ ಅಲ್ಲದೆ ಪಕ್ಕದ ಮರಳು ದಿಬ್ಬದ ಮೇಲೆ ಮಲಗಿದ್ದು, ಈ ವೇಳೆ ಮರಳು ಸಾಗಿಸಲು ಬಂದ ಟಿಪ್ಪರ್ ಆತ ಮಲಗಿದ್ದ ಮರಳು ದಿಬ್ಬದ ಮೇಲೆ ಟಿಪ್ಪರ್ ಚಲಿಸಿದ್ದು, ಇದರಿಂದ ಯುವಕ ಮೃತಪಟ್ಟಿದ್ದಾನೆ.
ರಾತ್ರಿವೇಳೆ ಮರಳು ತೆಗೆಯುವಾಗ ಈ ಘಟನೆ ನಡೆದಿದ್ದು, ಈ ಬಗ್ಗೆ ಸ್ಥಳಕ್ಕೆ ಬೇಟಿ ನೀಡ ಪೊಲೀಸರು ತನಿಖ ಕೈಗೊಂಡಿದ್ದಾರೆ ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.