ಭಟ್ಕಳ: ಮನೆಯ ಪಕ್ಕದ ತೋಟದ ಬಾವಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಳಲಖಂಡ ಗುಳ್ಮೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಪ್ರತಿಭಾ ಮಂಗಳಾ ಗೊಂಡ ಎಂದು ಗುರುತಿಸಲಾಗಿದೆ. ಈಕೆ ಎಂದಿನoತೆ ರಾತ್ರಿ ಊಟಮಾಡಿ ಮಲಗಿಕೊಂಡವಳು ಬೆಳಿಗ್ಗೆ ಎದ್ದು ನೋಡಿದಾಗ ಮಲಗಿದ್ದ ಜಾಗದಲ್ಲಿ ಯುವತಿ ಇರಲಿಲ್ಲ. ಈ ಹಿನ್ನೆಲೆ ಮನೆಯವರು ಎಲ್ಲಾ ಕಡೆ ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ.
ನಂತರ ಅಲ್ಲೇ ಮನೆಯ ಪಕ್ಕದ ತೋಟದ ಬಾವಿಯಲ್ಲಿ ನೋಡಿದಾಗ ಬಾವಿಯ ನೀರಿನಲ್ಲಿ ಪ್ರತಿಭಾಳ ಮೃತ ಶರೀರ ಕಂಡುಬAದಿದೆ. ಈಕೆ ಬೈಂದೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಳು.
ಅವಳಿಗೆ ಹುಡುಗನೊಬ್ಬನ ಪರಿಚಯವಿದ್ದು, ನನ್ನ ಮಗಳ ಸಾವಿಗೆ ಈತನೇ ಕಾರಣವಾಗಿರುವ ಬಗ್ಗೆ ಅವನ ಮೇಲೆ ನಮಗೆ ಸಂಶಯ ಇದೆ ಎಂದು ಯುವತಿಯ ತಂದೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.