ಕಾರವಾರ : ಕಾರವಾರ- ಅಂಕೋಲಾ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ತನಗೆ ಕಳೆದ ಕೆಲ ದಿನಗಳಿಂದ ಜೀವ ಬೆದರಿಕೆ ಇದೆ ಎನ್ನುವ ಗುಟ್ಟನ್ನ ಇಂದು ಮಾಧ್ಯಮದವರ ಎದುರು ಬಿಚ್ಚಿಟ್ಟಿದ್ದಾರೆ.

ರಾತ್ರಿ ಸಮಯದಲ್ಲಿ ತನ್ನ ಮನೆಯ ಎದುರಿನ ಬೀದಿ ದೀಪವನ್ನ ತೆಗೆದು ಹೆದರಿಸುತ್ತಾರೆ.ಹೊರಗಡೆ ಹೋಗಿರುವ ಸಂದರ್ಭದಲ್ಲಿ ಟ್ರಕ್ ತಂದು ನನ್ನ ವಾಹನಕ್ಕೆ ಟಕ್ರ್ ಹಾಯಿಸಲು ಯತ್ನಿಸುತ್ತಾರೆ‌. ನಾನು ಎಲ್ಲೆ ಹೋದ್ರು ಕೂಡ ಕಾರ್ ನಲ್ಲಿ ಫೋಲೋ ಮಾಡುವ ಘಟನೆ ಕೂಡ ನಡಿತ್ತಾ ಇದೆ. ಅಷ್ಟೆ ಅಲ್ಲದೆ ನನ್ನ ಮತ್ತು ನನ್ನ ಅಕ್ಕನ ಮಗನ ಕಿಡ್ನಾಪ್ ಮಾಡಲು ಪ್ರಯತ್ನಿಸಲಾಗಿದೆ..

ಈ ಹಿಂದಿನಿಂದಲ್ಲೂ ಇದನ್ನ ಮಾಡತ್ತಿದ್ದಾರೆ. ಅದನ್ನ ಈಗ ಸಹ  ಮುಂದುವರೆಸಿದ್ದಾರೆ. ಆದರೆ ಯಾರು ಏನು ಅಂತಾ ಇದುವರೆಗೂ  ಗೊತ್ತಾಗುತ್ತಿಲ್ಲ. ನನ್ನಗೆ ಅನೇಕ ವಿರೋಧಿಗಳು ಇದ್ದಾರೆ..ತಮಗೆ ಅಧಿಕಾರ ಸಿಕ್ಕಿಲ್ಲ ಎಂದು ಹತಾಶರಾದವರೂ ಇದ್ದಾರೆ‌ ನಾನು ಓರ್ವ ಮಹಿಳೆಯಾಗಿರುವುದರಿಂದ ನನ್ನ ಬೆಳವಣಿಕೆ ಹಾಗೂ ನಾನು ಶಾಸಕಿ ಆದ ಬಳಿ ಮಾಡಿರುವ ಅಭಿವೃದ್ಧಿ ಕೆಲಸವನ್ನ ನೋಡಿ ಸಹಿಸಿಕೊಳ್ಳಲಾಗದವರು ಇದ್ದಾರೆ‌.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರರ ಗಮನಕ್ಕೆ ತರಲಾಗಿದೆ.ಹೀಗಾಗಿ ಭದ್ರತೆ ಪಡೆದುಕೊಂಡಿದ್ದೆನೆ‌. ಈ ಎಲ್ಲಾ ಘಟನೆಯ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದಿದ್ದು ಅವರೂ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.ಈ ಬಗ್ಗೆ ದಾಖಲಿಸುತ್ತೆನೆ. ನನ್ನಗೆ ಬೆದರಿಕೆ ಹಾಕಿದ್ದರೆ ಓಡಿ ಹೋಗತ್ತಿನಿ ಅಂತಾ ತಿಳಕೊಂಡಿದ್ದಾರೆ.

ನಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ..ಅವರು  ಸಾಯಿಸಿದ್ರೆ ಸಾಯುವುದೇ ಹಾಟ್ ಅಟ್ಯಾಕ್ ಬಂದ್ರೂ ಸಾಯುವುದೇ . ಎಲ್ಲೋ ಒಂದುಕಡೆ ಸಾಯುವುದು ಒಂದೇ ಸಲ. ನಾನು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿ ಸಾಯುತ್ತೇ‌ನೆ ಎಂದು ಬೆದರಿಕೆ ಹಾರುವವರಿಗೆ ಶಾಸಕಿ ರೂಪಾಲಿ ನಾಯ್ಕ ತಿರುಗೇಟು ನೀಡಿದ್ದಾರೆ.