ಗೋಕರ್ಣ : ಸಮುದ್ರದಲ್ಲಿ ಈಜಲು ಹೋಗಿ ಮುಳುಗುತಿದ್ದ ಐವರು ಪ್ರವಾಸಿಗರ ರಕ್ಷಣೆ ಮಾಡಿರುವ ಘಟನೆ ಕುಡ್ಲೆ ಬೀಚ್ ನಲ್ಲಿ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ಅಮನ್ (32),ನವಾಜ್ (31),ಅಷಬಕ್ (30) ಹುಬ್ಬಳಿ ಮಾಲದ ವರದಾರಾಜ್ (22), ಸಂಜಯ್ ಕುಮಾರ್ (22) ರಕ್ಷಣೆಗೊಳಗಾದವರು.

ಹುಬ್ಬಳ್ಳಿ ಮತ್ತು ಹಾವೇರಿ ಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು.ಪ್ರವಾಸಿ ಮಿತ್ರ ಶೇಖರ್ ಪೂಜಾರಿ , ಲೈಪ್ ಗಾರ್ಡ ನವೀನ್ ಅಂಬಿಗ,ನಾಗೇಂದ್ರ ಎಂಬುವವರಿಂದ ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.