ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇದ್ದು, ಮೂರು ಪಕ್ಷಗಳು ಗೆಲ್ಲುವ ಅರ್ಭ್ಯರ್ಥಿಯನ್ನ ಕಣಕ್ಕಿಳಿಸಲು ಮುಂದಾಗಿದೆ. ಬಿಜೆಪಿ ರಾಜ್ಯದಲ್ಲಿ ಸುಮಾರು ಹತ್ತು ಕ್ಷೇತ್ರದಲ್ಲಿ ಹೊಸಬರಿಗೆ ಟಿಕೇಟ್ ನೀಡಲು ಮುಂದಾಗಿದ್ದು, ಕರಾವಳಿಯಲ್ಲಿ ಈ ಭಾರಿ ಮೂವರಿಗೆ ಚಾನ್ಸ್ ಸಿಗೋದು ಡೌಟ್ ಎಂಬ ಮಾತು ಬಿಜೆಪಿ ವಯದಲ್ಲಿ ಹರಿದಾಡುತ್ತಿದೆ‌.

ಕರ್ನಾಟಕದಲ್ಲೂ ಬಿಜೆಪಿ ಈ ಭಾರಿ ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿಯನ್ನ ಕಣಕ್ಕಿಸಲು ಮುಂದಾಗಿದೆ. ಗುಜರಾತ್ ನಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿ ಸಹ ಆಗಿದೆ. ಅದೆ ವಿಶ್ವಾಸವನ್ನ ಇಟ್ಟುಕೊಂಡಿರುವ ಬಿಜೆಪಿಯ ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲೂ ಅದೆ ಪ್ರಯೋಗಕ್ಕೆ ಕೈ ಹಾಕಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಯಾವೇಲ್ಲಾ ಶಾಸಕರ ವಿರುದ್ಧ ಭೃಷ್ಟಾಚಾರ ಆರೋಪ, ಸಂಘ ಪರಿವಾರದ ಜೊತೆ ಉತ್ತಮ ಸಂಬಂಧ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಲ್ಲವೋ ಅಂತಹ ಶಾಸಕರನ್ನ ಕೈ ಬಿಟ್ಟು ಹೊಸವರನ್ನ ಕಣಕ್ಕಿಳಿಸಬೇಕು ಎನ್ನುವ ಬಗ್ಗೆ ಪಕ್ಷ ಮುಂದಾಗಿದೆ ಎನ್ನಲಾಗುತ್ತಿದೆ.

ಹಾಲಿ ಇರುವ ಶಾಸಕರ ಮೇಲೆ ಕ್ಷೇತ್ರದ ಜನತೆಗೆ ಒಳ್ಳೆಯ ಅಭಿಪ್ರಾಯ ಇಲ್ಲಾದಲ್ಲಿ‌ ಹಾಗೂ ಭೃಷ್ಟಾಚಾರ ಸೇರಿದಂತೆ ಹಲವು ಆರೋಪ ಇರುವ ಶಾಸಕರನ್ನ ಪುನಃ ಸ್ಪರ್ಧೆ ಇಳಿಸಿದ್ದರೆ, ವಿರೋಧ ಪಕ್ಷದವರಿಗೆ ಪ್ರಚಾರದ ಅಸ್ತ್ರವಾಗಬಹುದು ಹಾಗೆ ಅದರ ಪರಿಣಾಮ ಆ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶವಿದ್ದರು ಕೈ ತಪ್ಪಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ ಇಟ್ಟುಕೊಟ್ಟು ಹೊಸಬರನ್ನ ಕಣಕ್ಕೆ ಇಳಿಸಿದ್ದರೆ ಅವರ ವಿರುದ್ಧ ಯಾವುದೇ ಆರೋಪ ಮಾಡಲು ವಿರೋಧ ಪಕ್ಷಗಳಿಗೆ ಮಾರ್ಗ ಇರುವುದಿಲ್ಲ ಎನ್ನುವ ಕಾರಣಕ್ಕೆ ಹೊಸ ತಂತ್ರ ಹೆಣೆಯಲು ಬಿಜೆಪಿ ಈ ಭಾರಿ ಮುಂದಾಗಿದೆ.

ಕರಾವಳಿಯಲ್ಲಿ ಮೂವರಿಗೆ ಟಿಕೇಟ್ ಕೈ ತಪ್ಪೋ ಸಾಧ್ಯತೆ

ಕಳೆದ ಭಾರಿಯ ಚುನಾವಣೆಯಲ್ಲಿ ಕಾರವಾರದಿಂದ ಮಂಗಳೂರಿನವರೆಗೆ ಹೆಚ್ಷಿನ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೆ ಆಯ್ಕೆಯಾಗಿದ್ದಾರೆ. ಅದರಲ್ಲಿ ಮೂರರಿಂದ ನಾಲ್ಕು ಹಾಲಿ ಶಾಸಕರ ವಿರುದ್ಧ ಭೃಷ್ಟಾಚಾರ, ಪಕ್ಷದ ಕಾರ್ಯಕರ್ತರ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ ಇರುವುದು. ಅಭಿವೃದ್ಧಿ ಹಾಗೂ ಸಂಘಟನೆಯಲ್ಲಿ ಹಿಂದೆ ಬಿದ್ದಿರುವುದು ಹಾಗೂ ಸಂಘ ಪರಿವಾರದವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.ಈ ಕಾರಣಕ್ಕೆ ಯಾವ ಯಾವ ಶಾಸಕರ ಮೇಲೆ ಆರೋಪ ಕೇಳಿ ಬರುತ್ತಿದೆ ಅಂತಹವರ ಕೈ ಬಿಡುವ ಬಗ್ಗೆ ಪಕ್ಣದ ನಾಯಕರು ಪಟ್ಟಿಯೊಂದನ್ನ ಸಿದ್ದ ಪಡಿಸಿಕೊಂಡಿದ್ದು, ಅವರ ಬದಲಿಗೆ ಹೊಸಬರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎನ್ನುವ ಬಗ್ಗೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತ ಲಭ್ಯವಾಗಿದೆ.