ಧಾರವಾಡ : ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡದಲ್ಲಿ ಇದೀಗ ವಿದ್ಯಾವಂತರೆ ತಲೆ ತಗ್ಗಿಸುವಂತಾಗಿದೆ. ಇದಕ್ಕೆಲ್ಲ  ಕೆಪಿಸಿಸಿ ಸದಸ್ಯನ ವರ್ತನೆ ಇದಕ್ಕೆ ಕಾರಣವಾಗಿದೆ.

ಮಗಳ ಮದುವೆಯ ಹಲ್ದಿ (ಅರಿಷಣ ಹಚ್ಚುವುದು) ಕಾರ್ಯಕ್ರಮಕ್ಕೆ  ಡಾನ್ಸರ್ ಕರೆಸಿದ್ದ‌ ಸೋ ಕಾಲ್ಡ್ ಮುತವಲ್ಲಿ ಫಯಾಜ್ ಬಸ್ತವಾಡ, ಸಮಾಜದಲ್ಲಿ ತಾವು ಹೇಗೆ ಎಂಬುದನ್ನ  ವರ್ಥನೆಯಿಂದ  ಸಮಾಜಕ್ಕೆ  ತೋರಿಸಿಕೊಟ್ಟಿದ್ದಾರೆ.

ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಸಚಿವ ಆಪ್ತ ಶಿವಶಂಕರ ಹಂಪಣ್ಣನವರ ಅಸಭ್ಯ ಹಾಡಿಗೆ  ಮುಸ್ಲಿಂ ಸಮುದಾಯದ ಮನೆಯಲ್ಲಿ ಕುಣಿದು ‘ಚೆಲುವೆಗೆ’ ಹಣ ತೂರಿ ತಮ್ಮ ಮೈ ಕುಣಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ತಾವೊಬ್ಬ ಹಿರಿಯ ರಾಜಕಾರಣಿ ತಮಗೆ ಮೊಮ್ಮಕ್ಕಳು ಇದ್ದಾರೆ ಎಂಬುದನ್ನ ಮರೆತ ಈ ಶಿವಶಂಕರ ಹಂಪಣ್ಣನವರು ಕುಣಿದಿದ್ದಾರೆ.

ಫಯಾಜ್ ಬಸ್ತವಾಡ ಕೂಡಾ ಮಾಜಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಹಲವು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವುದು ಪೊಲೀಸರಿಗೆ ಗೊತ್ತೆಯಿದೆ. ಆದರೆ, ಇಂಥವರಿಂದಲೇ ತಮ್ಮ ಹೆಸರಿಗೆ ಕಳಂಕ ಬರುತ್ತಿದೆ ಎಂಬ ಸತ್ಯ ಮಾಜಿ ಸಚಿವರಿಗೆ ಇನ್ನೂ ಗೊತ್ತಾಗದೇ ಇರುವುದು ಅಚ್ಚರಿ ಮೂಡಿಸುತ್ತಿದೆ.

ಮುಸ್ಲಿಂ ಸಮಾಜದ ಓರ್ವ ಮುತವಲ್ಲಿ ಆಗಿರುವ ಫಯಾಜ್ ಬಸ್ತವಾಡ ತನ್ನ ಮನೆಯಲ್ಲಿ ಎಂತಹ ಸಂಸ್ಕೃತಿಯನ್ನ ಬೆಳೆಸುತ್ತಿದ್ದಾರೆಂಬುದು ಈ ಮೂಲಕ ಬಹಿರಂಗವಾಗಿದೆ. ಸಮಾಜದ ಬಗ್ಗೆ ಮಾತಾಡುವ ಹಿರಿಯರು ಈ ಬಗ್ಗೆ ಗಮನ ಹರಿಸಬೇಕಿದೆ.

ಧಾರವಾಡವೆಂಬ ಸುಸಂಸ್ಕೃತರ ನಾಡಿನಲ್ಲಿ ಬೇರೆ ಕಡೆಯಿಂದ ಡಾನ್ಸರ್‌ಗಳನ್ನ ಕರೆಸಿ ಕುಣಿಸುವ ವ್ಯವಸ್ಥೆ ನಡೆಯುತ್ತಿದೆ ಎಂಬುದು ಪೊಲೀಸ್ ಕಮೀಷನರ್ ಅವರಿಗೆ ಗೊತ್ತಾಗಬೇಕಿದೆ. ದೇಶ, ದೇಶಾಭಿಮಾನ ಮತ್ತೂ ಸಂಸ್ಕೃತಿಗಳ ಬಗ್ಗೆ ಮಾತಾಡುವ ಸಂಘಟನೆಗಳೂ ಇಂತಹ ಘಟನೆಗಳನ್ನ ವಿರೋಧಿಸಬೇಕಿದೆ.