ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಯ ಹಾಟ್ ಸ್ಪಾಟ್ ಆಗಿದ್ದು, ಈಗಾಗಲೇ ಪ್ರಕರಣಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಕೆ.ಎಫ್.ಡಿ ಆತಂಕ ಮತ್ತೆ ಕಾಡತೊಡಗಿದೆ.ಒಂದೇ ಕವಚದಿನದಲ್ಲಿ 8 ಜನರಲ್ಲಿ ಮಂಗನಕಾಯಿಲೆ ಪತ್ತೆಯಾಗಿದ್ದು, ಕೇವಲ ಎರಡು ವಾರದ ಅವಧಿಯಲ್ಲಿ ಕೆಎಫ್‌ಡಿ ಪ್ರಕರಣಗಳ ಸಂಖ್ಯೆ 36ಕ್ಕೆ ಏರಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದ ಹತ್ತು ವರ್ಷದ ಮಗು ಚೇತರಿಸಿಕೊಂಡಿದ್ದಾಳೆ.
ಸಿದ್ದಾಪುರದ ಕೊರ್ಲಕೈ ಹಾಗೂ ಆಡುಕಟ್ಟೆ ಈ ಒಂದು ಹಳ್ಳಿಗಳ್ಳಲ್ಲೆ ಹೆಚ್ಚಾಗಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದೆ. ಉತ್ತರಕನ್ನಡ ಜಿಲ್ಲಾಡಳಿತ ಆರೋಗ್ಯ ಇಲಾಖೆಯ ಮೂಲಕ ಪೂರಕ ಔಷಧಿಗಳನ್ನು ಕೂಡಾ ವಿತರಿಸಲಾರಂಭಿಸಿದೆ,
ಈ ಹಿಂದೆ ಇದೇ ರೀತಿ ಪ್ರಾರಂಭವಾಗಿದ್ದ ಮಂಗನಕಾಯಿಲೆ ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಉಲ್ಬಣಗೊಂಡು,7ಜನರನ್ನು ಬಲಿ ಪಡೆದುಕೊಂಡಿತ್ತು. ಅಂತಹ ಪರಿಸ್ಥಿತಿ ಮತ್ತೆ ಕಾಣಬಾರದು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿದೆ.
ಮಂಗನಕಾಯಿಲೆ ಕಾಣಿಸಿಕೊಂಡ ಪ್ರದೇಶಗಳಲ್ಲೆಲ್ಲಾ ಡೆಫಾ ಅನ್ನೋ ತೈಲಗಳನ್ನು ವಿತರಿಸಲಾಗುತ್ತಿದೆ.ಕಳೆದ 2 ವರ್ಷಗಳ ಹಿಂದೆ ಸರಕಾರ ಮಂಗನಕಾಯಿಲೆಯ ಲಸಿಕೆಯನ್ನು ಬಂದ್ ಮಾಡಿದ್ದು, ಸದ್ಯಕ್ಕೆ ಯಾವುದೇ ಹೊಸ ಲಸಿಕೆಯನ್ನಾಗಲೀ ಅಥವಾ ಹೊಸ ಔಷಧವನ್ನಾಗಲೀ ಆರೋಗ್ಯ ಇಲಾಖೆ ಇದಕ್ಕೆ ಸೂಚಿಸಿಲ್ಲ. ಇದರಿಂದ ರೋಗ ಮತ್ತಷ್ಟು ಉಲ್ಭಣವಾಗೋ ಸಾಧ್ಯತೆಗಳಿದ್ದು, ಜನರು ಸಾಕಷ್ಟು ಭೀತಿಯಲ್ಲೇ ದಿನದೂಡುವಂತಾಗಿದೆ.
ಇದನ್ನೂ ಓದಿ:ನಾನು ಸತ್ತಿಲ್ಲ ಬದುಕಿದ್ದೇನೆಂದು ಹೇಳಿದ ಪೂನಂಪಾಂಡೆ
ಇನ್ನು ರಾಜ್ಯದ ಮಲೆನಾಡಿಗೆ ಮಾತ್ರವೆ ಸೀಮಿತವಾಗಿದ್ದ ಮಂಗನ ಕಾಯಿಲೆ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಮಲೆನಾಡಿನ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯದಲ್ಲಿ 1957ರಲ್ಲಿ ಮೊದಲ ಬಾರಿಗೆ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಾವಿರಾರು ಜನರು ಈ ಕಾಯಿಲೆಗೆ ತುತ್ತಾದರು. ನೂರಾರು ಜನ ಪ್ರಾಣ ಕಳೆದುಕೊಂಡರು. ಆತಂಕದ ವಿಷಯ ಏನೆಂದರೆ, ಮೊದಲು ರಾಜ್ಯದ ಮಲೆನಾಡಿಗೆ ಮಾತ್ರವೆ ಸಿಮೀತವಾಗಿದ್ದ ಮಂಗನ ಕಾಯಿಲೆ ಇದೀಗ ಪಶ್ಚಿಮ ಘಟ್ಟ ಹರಡಿರುವ ಕರ್ನಾಟಕ ಸೇರಿ ಮಹಾರಾಷ್ಟ್ರ,ಗೋವಾ, ಕೇರಳ ಮತ್ತು ತಮಿಳುನಾಡಿಗೂ ವಿಸ್ತರಿಸಿಕೊಂಡಿದೆ. ಪ್ರತಿ ವರ್ಷವೂ ಮಲೆನಾಡಿನಲ್ಲಿ ಈ ಕಾಯಿಲೆಗೆ ಜನ ಬಲಿಯಾಗುತ್ತಿದ್ದಾರೆ.
ಪ್ರಕರಣಗಳು ವರದಿಯಾದಾಗ,ಯಾರಾದಾರೂ ಮೃತಪಟ್ಟಾಗ ಮಾತ್ರವೆ ಈ ಬಗ್ಗೆ ಚರ್ಚೆಗಳಾಗುತ್ತವೆ. ಆಡಳಿತ ಯಂತ್ರ, ಇಲಾಖೆ ಕೂಡ ಆಗ ಚುರುಕಾಗುತ್ತದೆ. ಆದರೆ ನಂತರದಲ್ಲಿ ಯಾರೊಬ್ಬರೂ ಆ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮತ್ತೆ ಮುಂದಿನ ವರ್ಷ ರೋಗ ಉಲ್ಬಣಗೊಂಡಾಗಲೆ ಮತ್ತೆ ಸುದ್ಧಿಯಾಗುವುದು. ಇದು ಸಾಮಾನ್ಯ ಜನರ ಜೀವಕ್ಕೆ ತೋರುತ್ತಿರುವ ಬೇಜವಾಬ್ದಾರಿತನ ಎಂದು ಹೇಳಲಾಗುತ್ತಿದೆ. ಜನರ ಪ್ರಾಣವನ್ನು ಹಿಂಡುವ ಈ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದು ಬಿಟ್ಟು ಈಗಿನ ಪರಿಹಾರ ದೊರಕಿಸಿಕೊಡುವುದೇ ದೊಡ್ಡ ಕೆಲಸ ಎನ್ನುವಂತಾಗಿದೆ.