ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲಾಧಿಕಾರಿ (uttara kannada, dc) ಅವರ ಹೆಸರಲ್ಲಿ ಸೈಬರ್ ವಂಚಕರಿಂದ ವಂಚನೆ ನಡೆದಿರುವ ಪ್ರಸಂಗ ನಡೆದಿದೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಫೋಟೋ ಬಳಸಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ ಮಾಡಲಾಗಿದ್ದು, Deputy Commissioner Uttara Kannada ಹೆಸರಿನಲ್ಲಿರುವ ಅಧಿಕೃತ ಫೇಸ್‌ಬುಕ್ ಇದ್ದು, ಇದು 2017ರಿಂದ ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುವ ಜಿಲ್ಲಾಡಳಿತದ ಅಧಿಕೃತ ಖಾತೆಯಾಗಿದೆ.
ಈಗಾಗಲೇ ಜಿಲ್ಲಾಧಿಕಾರಿ ಅವರ ಅಧಿಕೃತ ಗ್ರೂಪ್ ನಲ್ಲಿ 8ಸಾವಿರಕ್ಕೂ ಅಧಿಕ ಫಾಲೋವರ್ ಹೊಂದಿದ್ದು, ಅದೇ ಹೆಸರಿನಲ್ಲೇ ನಕಲಿ ಖಾತೆ ಸೃಷ್ಟಿಸಿ ಮೆಸೆಂಜರ್ ಮೂಲಕ ವಂಚನೆಗೆ ಯತ್ನಿಸಲಾಗಿದೆ.
ಐದು ದಿನದ ಹಿಂದೆ ಈ ನಕಲಿ ಫೇಸ್ ಬುಕ್ ಖಾತೆಯನ್ನ ಸೃಷ್ಟಿ ಮಾಡಲಾಗಿದೆ.ನಕಲಿ ಖಾತೆಯಲ್ಲಿ 111 ಮಂದಿ ಫಾಲೋವರ್ಸ್ ಹೊಂದಿದ್ದು, ಪರಿಚಯಸ್ಥರ ಅಧಿಕಾರಿಯೊಬ್ಬರು ವರ್ಗಾವಣೆಯಾಗಿದ್ದು ಅವರ ಮನೆಯ ವಸ್ತುಗಳನ್ನ ಖರೀದಿಸುವಂತೆ ಮೆಸೇಜ್ ರವಾನೆ ಮಾಡಿದ್ದು, ಮೆಸೇಜ್‌ನಿಂದ ಅನುಮಾನಗೊಂಡ ವ್ಯಕ್ತಿಯಿಂದ ನಕಲಿ ಖಾತೆ ಸೃಷ್ಟಿಯಾಗಿದ್ದು ಬೆಳಕಿಗೆ ಬಂದಿದೆ.