ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಇಂದು ಮುಂಜಾನೆ ಭಾರೀ ಪ್ರಮಾಣದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.
ಕಳೆದ ಕೆಲದ ದಿನಗಳಿಂದ ಬಿಸಿ ಗಾಳಿ ಉಂಟಾಗುತ್ತಿದ್ದು, ಆದಾಗ್ಯೂ ಚಳಿಗಾಲಕ್ಕಿಂತ ಅಧಿಕ ಪ್ರಮಾಣದಲ್ಲಿ ಇಂದು ಕರಾವಳಿ ತಾಲೂಕಿನ ಕುಮಟಾ,ಅಂಕೋಲಾ,ಕಾರವಾರ ಸೇರಿದಂತೆ ಎಲ್ಲೇಡೆ ದಟ್ಟವಾದ ಮಂಜು ಮುಸಿದ ವಾತಾವಣ ಉಂಟಾಗಿತ್ತು. ಬೆಳಿಗ್ಗೆ 8ಗಂಟೆಯ ತಕನ ಸೂರ್ಯನ ಪ್ರಕಾಶ ಬಿರುತ್ತಿರುವಾಗಲು ಮಂಜು ಕಾಣಿಸಿಕೊಂಡಿದೆ. ನಗರ,ಪಟ್ಟಣ ಪ್ರದೇಶಗಳಲ್ಲಿ ಅಷ್ಟೆ ಅಲ್ಲದೇ ಗ್ರಾಮೀಣ ಭಾಗದಲ್ಲಿ ಮಂಜು ಮಸುಕಿದ ವಾತಾವರಣ ಉಂಟಾಗಿತ್ತು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನ ಸವಾರರು ದಡ್ಡವಾದ ಮಂಜು ಇರುವ ಕಾರಣ ಸಂಚಾರಿಸಲು ಅಡಚಣೆ ಎದುರಾಗುವಂತಾಗಿತ್ತು. ಚಳಿಗಾಲದಲ್ಲೂ ಕಾಣಿಸಿಕೊಳ್ಳದಷ್ಟು ಮಂಜು ಕಾಣಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು.ಅನಿರೀಕ್ಷತವಾಗಿ ಮಂಜು ಉಂಟಾಗಿರುವುದರಿಂದಾಗಿ ಗೇರು,ಮಾವು,ಹಲಸು, ಸೇರಿದಂತೆ ಅನೇಕ ಬೆಳೆಗಳ ಮೇಲೆ ಬೆಳೆಗಳಿಗೆ ಹಾನಿ ಉಂಟಾಗಲಿದೆ. ಪ್ರಾಕೃತಿಕ ವೈಪಲ್ಯದಿಂದಾಗಿ ಈ ವೇಳೆ ಮಂಜು ಉಂಟಾಗಿರಬಹುದು ಎಂದು ತಜ್ಞನರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ
- Gold /20ಲಕ್ಷ ಮೌಲ್ಯದ ಬಂಗಾರದ ಆಭರಣ ಮಾಲೀಕರಿಗೆ ತಲುಪಿಸಿದ ಹುಸೇನ್ ಶೇಕ್
- ಬೆಳ್ಳಂಬೆಳಗ್ಗೆ ದಾಂಡೇಲಿಯಲ್ಲಿ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ ಪಡೆ
- ಕಾರವಾರದಲ್ಲಿ ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್
- ಮೇ 4ರಿಂದ 5 ದಿನಗಳ ಕರಾವಳಿ ಉತ್ಸವ : ಅಧಿಕೃತ ಘೋಷಣೆ, ಮೊದಲ ದಿನ ಆಗಮಿಸಲಿರು ಗಾಯಕ ಸೋನು ನಿಗಮ್
.