ಸುದ್ದಿಬಿಂದು ಬ್ಯೂರೋ
ಕಾರವಾರ: ಮಾಜಿ ಶಾಸಕರ ಅಧಿಕಾರ ಅವಧಿಯಲ್ಲಿಯೇ ಗೋವಾಕ್ಕೆ ಅಕ್ರಮ ಸ್ಪಿರಿಟ್‌ ಸಾಗಾಟವಾಗುತ್ತಿತ್ತು. ಅವರಿಗೂ ಈ ದಂಧೆಗೂ ಈ ಸಂಬಂಧ ಇರಬೇಕು ಎಂದು ಕಾರವಾರ ಶಾಸಕ ಸತೀಶ ಸೈಲ್ ಮಾಜಿ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಶಾಸಕ ಸತೀಶ ಸೈಲ್ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾಜಾಳಿಯಲ್ಲಿ ಸ್ಪಿರಿಟ್‌ ಟ್ಯಾಂಕರನ್ನ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದ ಪ್ರಕರಣದಲ್ಲಿ ನನ್ನ ವಿರುದ್ಧ ಆಧಾರರಹಿತವಾಗಿರುವ ಆರೋಪ ಆರೋಪ ಮಾಡಿದ್ದಾರೆ ಎನ್ನುವ ಮೂಲ ಮಾಜಿ ಶಾಸಕರ ಆರೋಪವನ್ನ ತಳ್ಳಿಹಾಕಿದ್ದಾರೆ.

ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಸ್ಪಿರಿಟ್‌ ತುಂಬಿದ ಟ್ಯಾಂಕರ್ ಹಾಗೂ ಚಾಲಕನನ್ನ ವಶಕ್ಕೆ ಪಡೆದುಕೊಂಡರು ಸಹ ಪ್ರಕರಣ ದಾಕಲಿಸಿರಲಿಲ್ಲ. ಈ ಬಗ್ಗೆ ನನ್ನಗೆ ವಿಚಾರ ಗೊತ್ತಾದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ ಜೊತೆ ಚರ್ಚಿಸಿದ್ದೇನೆ. ಹೊರತು ತನಗೂ ಟ್ಯಾಂಕರ್ ಗೂ ಯಾವ ಸಂಭಂದವೂ ಇಲ್ಲ ಎಂದು ಶಾಸಕ ಸತೀಶ್ ಸೈಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಪತ್ರಕರ್ತರ ಜೊತೆಯೇ ಸ್ಥಳಕ್ಕೆ ಹೋಗಿದ್ದೆ. ನಾನು ಈ ಪ್ರಕರಣದಲ್ಲಿ ಭಾಗಿಯಿದ್ದರೆ ಯಾಕೆ ಪತ್ರಕರ್ತರನ್ನ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದೆ? ಆರೋಪ ಮಾಡುವ ಮುನ್ನ ಮಾಜಿ ಶಾಸಕರಾಗಿರುವ ಇವರು ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ಸೈಲ್ ಹೇಳಿದರು.

ಕೆಲದಿನದ ಹಿಂದೆ ಸಹ ವಾಹನ ಒಂದನ್ನ ಅಬಕಾರಿ ಅಧಿಕಾರಿಗಳು ಹಿಡಿದು ಬಿಟ್ಟ ವಿಷಯ ತಿಳಿದಿತ್ತು. ಇದೇ ರೀತಿ ಈ ಪ್ರಕರಣ ಆಗಬಹುದು ಎಂದು ಪತ್ರಕರ್ತರನ್ನ ಕರೆದುಕೊಂಡು ಹೋಗಿದ್ದೆ. ನನ್ನ ಮೇಲೆ ಆರೋಪ ಮಾಡಲು ಯಾವ ವಿಷಯವೂ ಇಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಚಾಲಕನನ್ನ ವಶಕ್ಕೆ ಪಡೆದು ಮೂರ್ನಾಲ್ಕು ದಿವಾದರು ದೂರು ದಾಖಲಿಸಿಕೊಳ್ಳದೆ ಇರುವುದನ್ನ ಪ್ರಶ್ನೆ ಮಾಡಿದ್ದೇ‌ನೆ. ಈ ವಿಚಾರವನ್ನೆ ಮಾಜಿ ಶಾಸಕರು ದೊಡ್ಡದಾಗಿ ಮಾಡಿದ್ದಾರೆ. ಒಬ್ಬರ ಮೇಲೆ ಆರೋಪ ಮಾಡುವಾಗ ಅದರ ಬಗ್ಗೆ ಸರಿಯಾಗಿ ತಿಳಿದುಕೊಡು ಮಾತನಾಡಬೇಕು ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.