ಸುದ್ದಿಬಿಂದು ಬ್ಯೂರೋ
ಕಾರವಾರ : ನಗರದ ಸೈಂಟ್ ಮೈಕಲ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಹೆಚ್ಚಿನ ಶುಲ್ಕವನ್ನ ತೆಗೆದುಕೊಳ್ಳಲಾಗುತ್ತದೆ ಎನ್ನುವ ಆರೋಪವೊಂದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಕಾರವಾರ ಅಂಕೋಲಾ ಕ್ರಿಶ್ಚಿಯನ್ ವೇದಿಕೆಯ ಲಿಯೋ ಲ್ಯೂಯಿಸ್ ತಮ್ಮ ಹೇಳಿಕೆಯಲ್ಲಿ ಇತರ ಶಿಕ್ಷಣ ಸಂಸ್ಥೆಯನ್ನ (Educational Institute) ತೀರಾ ಕೆಳಮಟ್ಟಕ್ಕೆ ಹೋಲಿಸಿ ಮಾತನಾಡುವ ಮೂಲಕ ಹೋಸ ವಿವಾದಹುಟ್ಟು ಹಾಕಿದ್ದು, ಇವರ ಹೇಳಿಕೆ ಈಗ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರದ ಜಿಲ್ಲಾ ಪತ್ರಿಕಾಭವನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಯೋ ಲ್ಯೂಯಿಸ್‌ ಉತ್ತಮ ಶಿಕ್ಷಣ ನೀಡಲು ನಿಯಮಾನುಸಾರ ಶುಲ್ಕವನ್ನ ತೆಗೆದುಕೊಂಡರೆ ತಪ್ಪೆನಿದೆ..? ಇಸ್ವಣ ಅಥವಾ ನಗ್ಲೆ ಮೀನು “ತಾರ್ಲೆ” ಬಲೆಗೆ ಬಿಳಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಇವರ ಅರ್ಥದಲ್ಲಿ ಸ್ಟೇಂಟ್ ಮೈಕಲ್ಸ್ ಶಿಕ್ಷಣ ಸಂಸ್ಥೆ (St. Michael’s School, Karwar) “ಇಸ್ವಣಾ ಮೀನು₹ ಉಳಿದ‌ ಶಿಕ್ಷಣ‌ ಸಂಸ್ಥೆಗಳು “ತರ್ಲೆ” ಮೀನು ಎನ್ನುವ ಅರ್ಥದಲ್ಲಿ ಮಾತ್ನಾಡಿದ್ದಾರೆ. ಸರಕಾರಿ ಕನ್ನಡ ಶಾಲೆಯಲ್ಲಿ ಕಲೆಯುವ ಮಕ್ಕಳು ಅಂದರೆ ಇವರ ಅರ್ಥದಲ್ಲಿ “ತಾರ್ಲೆ” ಮೀನು..

ಇವರ ಮಾತಿನ ಅರ್ಥವನ್ನ ನೋಡಿದ್ದರೆ ಇವರ ಶಿಕ್ಣಣ ಸಂಸ್ಥೆ ಮಾತ್ರ ಚೆನ್ನಾಗಿರೋದು, ಉಳಿದ ಸರಕಾರಿ ಕನ್ನಡ ಶಾಲೆ ಸೇರಿದಂತೆ ಎಲ್ಲವೂ ಸಹ “ಅವರ ಮಾತಿನ ಅರ್ಥದಲ್ಲಿ ಹೇಳೋದಾದರೆ “‘ತಾರ್ಲೆ” ಮೀನು. ಇವರ ಈ ವಿವಾದಾತ್ಮಕ ಹೇಳಿಕೆ ಕನ್ನಡ ಪರ ಸಂಘಟಕನ್ನ ಕೆಣಕುವಂತಾಗಿದೆ.

ಹೆಚ್ಚಿನ ಶುಲ್ಕ ಪಡೆದರೆ ಹೋರಾಟ ಅನಿವಾರ್ಯ
ಸ್ಟೇಂಟ್ ಮೈಕಲ್ಸ್ ಶಾಲೆಯಲ್ಲಿ ಪಾಲಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದರೆ ಅದನ್ನ ಖಂಡಿಸುತ್ತೇವೆ. ಪಾಲಕರು ತಮ್ಮ ಮಕ್ಕಳನ್ನ ಸರಕಾರಿ ಶಾಲೆಗೆ ಸೆರಿಸಬೇಕೆಂದು ನಾವು ಸರರಕಾರದ ಮೇಲೆ ಒತ್ತಡ ತರುತ್ತವೆ ಇಂಗ್ಲಿಷ್‌ ವ್ಯಾಮೋಹದಿಂದ. ಪಾಲಕರು “ತಾರ್ಲೆ ತಿನ್ನುವವರು” ಕೂಡ ಇಸ್ವಣ ಶಾಲೆಗೆ ಸೇರಿರುವಂತ ಚಲಪವನ್ನ ಹೊಂದಿದ್ದಾರೆ. ಇನ್ನೂ ಮುಂದಿನ ದಿನದಲ್ಲಿ ಈ ಶಿಕ್ಷಣ ಸಂಸ್ಥೆಯವರು ಪಾಲಕರಿಂದ ಹೆಚ್ಚಿನ ಶುಲ್ಕ ಪಡೆದಲ್ಲಿ ಪಾಲಕರೊಂದಿಗೆ ಸೇರಿ ಹೋರಾಟ ನಡೆಸಲಾಗುವುದು
ಭಾಸ್ಕರ್ ಪಟಗಾರ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು