ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ(uttara Kannada) ಜಿಲ್ಲಾ ಕೇಂದ್ರವಾಗಿರುವ ಕಾರವಾರದಲ್ಲಿರುವ ಕ್ರೀಮ್ಸ್ ಆಸ್ಪತ್ರೆcreams)ಅವ್ಯವಸ್ಥೆಯಿಂದ ಕೂಡಿದ್ದು ಇದಕ್ಕೆ ನಿರ್ದೇಶಕರೇ ಕಾರಣ ಎಂದು ಅಲ್ಲಿನ ವೈದ್ಯರೇ ಸಚಿವರ ಎದುರು ಬಿಚ್ಚಿಟ್ಟಿದ್ದಾರೆ
.

ಜಿಲ್ಲಾ ಉಸ್ತುವಾರಿ ಸಚಿವವರಾಗಿರುವ ಮಂಕಾಳು ವೈದ್ಯ ಅವರು ಇಂದು ಕ್ರೀಮ್ಸ್ ನಲ್ಲಿ ಸಭೆ ನಡೆಸಿದ್ದರು.ಸಭೆ ಆರಂಭದಿಂದ ಕೊನೆ ತನಕ ನಿರ್ದೇಶ ಗಜಾನನ ನಾಯಕ ಅವರ ವಿರುದ್ಧ ದೂರುಗಳ ಸರಮಾಲೆಯನ್ನೆ ಎಸೆದರು‌
ಕ್ರೀಮ್ಸ್ ಅವ್ಯವಸ್ಥೆಯ ಆಗರಕ್ಕೆ ಕಾರಣನೇ ನಿರ್ದೇಶಕ ಗಜಾನನ ನಾಯಕ್ ಕಾರಣ ಎಂದು ಸಾಲು ಸಾಲಾಗಿ ವೈದ್ಯರು ಆರೋಪಿಸಿದ್ದರು. ಕೆಲವು ವೈದ್ಯರ ಮಾತು ಕೇಳಿದ ಸಚಿವರು, ಶಾಸಕರೇ ಒಮ್ಮೆ ಕಂಗಾಲಾದ್ದರು

ಯಾವುದ ಸೌಲಭ್ಯ ಕೊಡಿ ಅಂತಾ ನಿರ್ದೇಶಕ ಬಳಿ ಕೇಳಿದ್ದರೆ ಯಾವುದನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದರು. ಇನ್ನೂ ನಿರ್ದೇಶಕ ಗಜಾನನ ನಾಯಕ್ ನೇಮಕಾತಿಯೇ ಅಕ್ರಮ ಎಂದು ಹಿರಿಯ ವೈದ್ಯರು ಮತ್ತು ವಿಧ್ಯಾರ್ಥಿಗಳು ಆರೋಪಿಸಿದ್ದರು.

ಅಷ್ಟೆ ಅಲ್ಲದೆ ಹಿರಿಯ ವೈದ್ಯರಿಗೆ ಕಿರುಕುಳ ನೀಡುವ ಬಗ್ಗೆಯೂ ದೂರು ಕೇಳಿಬಂತು.ಹೀಗಾಗಿ ಇಲ್ಲಿಗೆ ಯಾವ ವೈದ್ಯರು ಬರಲೊಪ್ಪುತ್ತಿಲ್ಲ ಎಂದು ವೈದ್ಯರು ಸಚಿವರ ಎದುರು ಹೇಳಿಕೊಂಡರು.ಸಭೆ ಆರಂಭದಿಂದ ಕೊನೆತನಕ ಬೇರೆ ಯಾವದೇ ವಿಷಯಸ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯದೆ ನಿರ್ದೇಶಕ ಗಜಾನನ ನಾಯಕ ವಿರುದ್ಧವೇ ದೂರುಗಳು ಜೋರಾಗಿತ್ತು. ಅವ್ಯವಸ್ಥೆ ಕಂಡು ಸಚಿವ ಮಂಕಾಳ ಮತ್ತು ಶಾಸಕ ಸತೀಶ್ ಸೈಲ್ ಕಿಡಿಕಾರಿದ್ದರು.