ಸುದ್ದಿಬಿಂದು ಬ್ಯೂರೋ
ಕಾರವಾರ
; (gruha jyoti) ಗೃಹಜ್ಯೋತಿ ಯೋಜನೆಯ ಚಾಲನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಆಡಳಿತ ಪಕ್ಷದ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಾಮಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಊಟದ ವೇಳೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಮಂತ್ರಣ ಪತ್ರಿಕೆಯ ಮುಖ್ಯ ಅಥಿತಿಗಳ ಪಟ್ಟಿಯಲ್ಲಿ ಆಡಲಿತ ಪಕ್ಷದ ಶಾಸಕ ಭೀಮಣ್ಣ ನಾಯ್ಕ (MLA Bhimanna Naik) ಅವರ ಹೆಸರನ್ನು ಕೊನೆಯಲ್ಲಿ ಮುದ್ರಿಸಲಾಗಿತ್ತು. ಅವರ ಹೆಸರಿಗಿಂತ ಮೊದಲು ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ವಿ. ಸಂಕನೂರ, ಶಾಂತಾರಾಮ ಸಿದ್ದಿ ಹಾಗೂ ಗಣಪತಿ ಉಳ್ವೆಕರ ಅವರ ಹೆಸರನ್ನು ಸೇರಿಸಲಾಗಿದೆ. ಇದನ್ನು ಗಮನಿಸಿದ ಶಾಸಕ ಭೀಮಣ್ಣ ನಾಯ್ಕ ಅವರು ಅಧಿಕಾರಿಗಳ ಜತೆ ಮಾತನಾಡಿ ಆಮಂತ್ರಣ ಪತ್ರಿಕೆಯ ಕುರಿತು ಅಸಮಾಧಾನಗೊಂಡರು.

ಈ ವೇಳೆ ಹೆಸ್ಕಾಂ ಅಧಿಕಾರಿಗಳು(HESCOM Officer) ಶಾಸಕ ಭೀಮಣ್ಣ ನಾಯ್ಕ ಅವರಿಗೆ ತಮ್ಮ ಕಣ್ತಪ್ಪಿನಿಂದಾಗಿ ನಡೆದ ತಪ್ಪಿನ ಬಗ್ಗೆ ತಿಳಿಸಿ, ವಿವರಣೆ ನೀಡಿದರಾದರೂ ಸಹ ಶಾಸಕ ಭೀಮಣ್ಣ ಮನವೊಲಿಸಲು ಸಾಧ್ಯವಾಗಲಿಲ್ಲ. ಅದ್ದರಿಂದ ಆಮಂತ್ರಣ ಪತ್ರಿಕೆಯನ್ನು ಬದಲಾಯಿಸುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು.