ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ : ಸದಾ ಸಿಮಿನಿಮಾ‌,ನಟನೆ ಅಂತಾ ತುಂಬಾ ಪುಲ್‌ಬ್ಯೂಜಿ ಆಗಿ ಇರತ್ತಾ ಇದ್ದ, ನಟ ಡಾಲಿ ಧನಂಜಯ್ (Actor Dolly Dhananjay)ಅವರು ಇಂದು ಮುರುಡೇಶ್ವರದಲ್ಲಿ ಅಕ್ವಾರೈಡ್ ಸಂಸ್ದೆಯಿಂದ ಸ್ಕೂಬ್ ಡೈವಿಂಗ್ ಮಾಡುವ ಮೂಲಕ‌ ಸಮುದ್ರಾಳದ ಜೀವರಾಶಿಗಳನ್ನ‌ ಕಣ್ತಂಬಿಕೊಂಡು ಸಖತ್‌‌ ಏಂಜಾಯ್ ಮಾಡಿದ್ದರು.

ಮುರುಡೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನ(ಮತ್ಸ್ಯ ಮೇಳ) ಕಾರ್ಯಕ್ರಮಕ್ಕೆ ಆಗಮಿಸಿದ ಸಮಯದಲ್ಲಿ ಅಕ್ವಾರೈಡ್ ಸಂಸ್ಥೆಯ ಬೋಟ್‌ನಲ್ಲಿ ತೆರಳು ನೇತ್ರಾಣಿ ದ್ವೀಪದಲ್ಲಿ ಸುಮಾರು ಒಂದು ಗಂಟೆಗಳ‌ ಕಾಲ‌ ಸ್ಕೂಬ್ ಡೈವಿಂಗ್ ಮಾಡಿದ್ದಾರೆ. ಕಳೆದ ಎರಡು ದಿನಗಳ‌ ಹಿಂದಷ್ಟೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸಹ ಸಚಿವ ಮಂಕಾಳು ವೈದ್ಯ ಅವರೊಂದಿಗೆ ನೇತ್ರಾಣಿಯಲ್ಲಿ ಸ್ಕೂಬ್ ಮಾಡೋ ಮೂಲಕ ಗಮನ ಸೆಳೆದಿದ್ದರು.

ಸ್ಕೂಬ್ ಡೈವಿಂಗ್ ಮಾಡಿದ ಬಳಿ ಅನುಭವ ಹಂಚಿಕೊಂಡ ಡಾಲಿ ಧನ ಧನಂಜಯ್ ಸ್ಕೂಬ್ ಮಾಡಿದ್ದು,ನಿಜಕ್ಕೂ ಜೀವನದಲ್ಲಿ ಸಾರ್ಥಕವಾಯತ್ತು. ಸಮುದ್ರ ಆಳದಲ್ಲಿನ ಜೀವರಾಶಿಗಳನ್ನ ನೋಡತ್ತಾ ಇದ್ದರೆ ಬಿಟ್ಟು ಬರೋದಕ್ಕೆ ಮನಸ್ಸೆ ಬರತ್ತಾ ಇರಲಿಲ್ಲ. ಇನ್ನೂ ಸ್ವಲ್ಪ ಸಮಯ ಇರಬೇಕು ಅನಸ್ತಾ ಇತ್ತು. ಆದರೆ ಮುಂದೊಂದು ದಿನ ಮತ್ತೆ ಬರತ್ತೆನೆ ಎಂದು ಹೇಳುವ ಮೂಲಕ ಅಕ್ವಾರೈಡ್ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೆ ಎಲ್ಲಾ ಸಿಬ್ಬಂದಿಗಳು ಧನ್ಯವಾದ ಹೇಳಿದ್ದಾರೆ.

ಗಮನಿಸಿ